ಹೋಟೆಲ್ ಉದ್ಯಮಿ ಗಂಗಾಧರ್ ಎನ್ ಶೆಟ್ಟಿ ಅಗ್ರಿಪಾಡ ಇನ್ನಿಲ್ಲ
Posted On:
05-10-2020 12:29AM
ಮುಂಬೈ ಅಗ್ರಿಪಾಡ ನಿವ್ ಉಡುಪಿ ನಿಕೇತನ್ ಮಾಲಕ ಹಾಗೂ ಉದ್ಯಮಿ ಗಂಗಾಧರ್ ಎನ್ ಶೆಟ್ಟಿ (67) ಕಳೆದ 03/10/2020 ರ ಶನಿವಾರ ಬೆಳಿಗ್ಗೆ ಸ್ವರ್ಗಸ್ಥರಾಗಿದ್ದಾರೆ.
ಮಡುಂಬು ಪಡ್ನಗುತ್ತು, ಪಡುಮನೆ ಸುಶೀಲ ಶೆಟ್ಟಿ ಹಾಗೂ ನಾರಾಯಣ ಶೆಟ್ಟಿ ದಂಪತಿಗಳ ಮಗನಾಗಿ 1953 ರಂದು ಜನಿಸಿದ ಗಂಗಾಧರ್ ಎನ್ ಶೆಟ್ಟಿಯವರು ಧಾರ್ಮಿಕ ಕ್ಷೇತ್ರಕ್ಕೂ ತನ್ನದೇ ಆದ ಅನೇಕ ಕೊಡುಗೆಗಳನ್ನು ನೀಡಿದ್ದಾರೆ.
ನಿವ್ ಉಡುಪಿ ನಿಕೇತನ್ ಹೋಟೆಲ್ ಬರೋಬ್ಬರಿ 60 ವರ್ಷಗಳ ಹಿಂದೆ ದಿವಂಗತ ನಾರಾಯಣ ಶೆಟ್ಟಿಯವರು ಸ್ಥಾಪಿಸಿದ ಹೋಟೆಲ್ ಆಗಿದ್ದು, ಇದನ್ನು ಅವರ ಹಿರಿಯ ಮಗನಾದ ಗಂಗಾಧರ್ ಎನ್ ಶೆಟ್ಟಿಯವರು ಮುನ್ನಡೆಸಿಕೊಂಡು ಬರುತ್ತಿದ್ದರು, ಈ ಹೋಟೆಲ್ ಸಾವಿರಾರು ಮಂದಿ ಕೆಲಸಗಾರರಿಗೆ ಉದ್ಯೋಗ ನೀಡಿದ ಸಂಸ್ಥೆಯಾಗಿದ್ದು.
ಮೃತರು ಸಹೋದರಂದಿರು, ಸಹೋದರಿ ಸೇರಿದಂತೆ ಧರ್ಮಪತ್ನಿ ಸುಜಾತ ಶೆಟ್ಟಿ, ಮಕ್ಕಳಾದ ಅಕ್ಷಯ್ ಶೆಟ್ಟಿ, ಅಭಿಷೇಕ್ ಶೆಟ್ಟಿ, ಸೊಸೆಯಂದಿರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ ಎಂದು ತಿಳಿಸಲು ವಿಷಾದ ವ್ಯಕ್ತಪಡಿಸುತ್ತೇವೆ.