ಬ್ಯಾಂಕುಗಳು ವಿಲೀನ ಪ್ರಕ್ರಿಯೆ ಒಂದೆಡೆ ಗ್ರಾಹಕರಿಗೆ ಕೊಂಚ ಕಿರಿಕಿರಿ ಎನಿಸಿದರೂ ತಮ್ಮ ಅಗತ್ಯತೆಗೆ ಬೇಕಾದ ಹಣವನ್ನು ತೆಗೆಯಲು ಎಟಿಮ್ ಗಳನ್ನು ಬಳಸುವುದು ಸಾಮಾನ್ಯ. ಆದರೆ ಶಂಕರಪುರ ಬ್ಯಾಂಕ್ ಆಫ್ ಬರೋಡದ ಇನ್ನಂಜೆಯ ಎಟಿಎಮ್ ಅಗತ್ಯಕ್ಕೆ ಹಣ ಬೇಕಾದವರಿಗೆ ತೆಗೆಯಲು ಸಾಧ್ಯವಾಗುತ್ತಿಲ್ಲ. ಕಾರಣ ಅದೆಷ್ಟೋ ದಿವಸದಿಂದ ಸ್ಥಬ್ದವಾಗಿದ್ದು ಅದರ ಬಗ್ಗೆ ಸಂಬಂಧಪಟ್ಟ ಬ್ಯಾಂಕಿನವರಿಗೆ ತಿಳಿಸಿದರೂ ಏನೂ ಪ್ರಯೋಜನವಾಗದ ಸ್ಥಿತಿಯಾಗಿದೆ. ಇನ್ನಾದರು ಸಂಬಂಧಪಟ್ಟ ಬ್ಯಾಂಕ್ ನವರು ಗ್ರಾಹಕರ ಹಿತದೃಷ್ಟಿಯಿಂದ ಇನ್ನಂಜೆಯ ಎಟಿಎಮ್ ನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.