ಕೊರೊನಾ ಮಹಾಮಾರಿಯ ಈ ಸಂದರ್ಭದಲ್ಲಿ ಬೆಳ್ಮಣ್ ರೋಟರಿಯ ಸಾಮಾಜಿಕ ಕಾರ್ಯಕ್ರಮಗಳು ಶ್ಲಾಘನೀಯ :- ರೋ| ಪಿ ಎಚ್ ಎಫ್ ಡಾ| ಅರುಣ್ ಹೆಗ್ಡೆ.
ಬೆಳ್ಮಣ್ ರೋಟರಿ ಸಂಸ್ಥೆಯ ೨ನೇ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಲಯ ೫ರ ಮಾಜಿ ವಲಯ ಸೇನಾನಿ ರೋ| ಅರುಣ್ ಹೆಗ್ಡೆ ಬೆಳ್ಮಣ್ ರೋಟರಿ ಸಂಸ್ಥೆಯ ಕಾಯಕಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ರೋ| ಶುಭಾಷ್ ಕುಮಾರ್ ವಹಿಸಿ ಎಲ್ಲರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ರೋ| ಪ್ರದೀಪ್ ಶೆಟ್ಟಿ, ರೋ| ನವೀನ್ ಶೆಣೈ ಹಾಗೂ ರೋ| ಮರ್ವಿನ್ ಮೆಂಡೋನ್ಸಾ ಇವರ ಹುಟ್ಟು ಹಬ್ಬಗಳನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ವಲಯ ೫ರ ಮಾಜಿ ಸಾಹಯಕ ಗವರ್ನರ್ ರೋ| ಸೂರ್ಯಕಾಂತ ಶೆಟ್ಟಿ ಶುಭ ಹಾರೈಸಿದರು. ಕಾರ್ಯಕ್ರಮವನ್ನು ರೋ| ವಿಘ್ನೇಶ್ ಶೆಣೈ ನಿರೂಪಿಸಿ , ಸಂಸ್ಥೆಯ ಕಾರ್ಯದರ್ಶಿ ರೋ| ರವಿರಾಜ್ ಶೆಟ್ಟಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ರೋಟರಿ ಬೆಳ್ಮಣ್ಮೀನ ಎಲ್ಲಾ ಸದಸ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ರೋ| ಪ್ರದೀಪ್ ಶೆಟ್ಟಿ, ರೋ| ನವೀನ್ ಶೆಣೈ ಹಾಗೂ ರೋ| ಮರ್ವಿನ್ ಮೆಂಡೋನ್ಸಾ ಪ್ರಾಯೋಜಿಸದರು .