ಕಳೆದ ಕೆಲವು ತಿಂಗಳ ಹಿಂದಷ್ಟೇ ನಮ್ಮ ಕಾಪು ವೆಬ್ ಪೋರ್ಟಲ್ ನಲ್ಲಿ ಕುಡಿಯುವ ನೀರಿನ ಯಂತ್ರದ ಬಗ್ಗೆ ವರದಿ ಮಾಡಿತ್ತು.. ಇಲ್ಲಿಯವರೆಗೆ ಯಾವುದೇ ಅಧಿಕಾರಿಗಳ ಪ್ರತಿಕ್ರಿಯೆಯೂ ವ್ಯಕ್ತವಾಗಿಲ್ಲ.
ಸರ್ವಿಸ್ ರೋಡ್ ನಲ್ಲಿ ಉಡುಪಿ, ಮಂಗಳೂರು ಎಕ್ಸ್ಪ್ರೆಸ್ ಬಸ್ ನಿಲ್ಲುವ ಜಾಗದಲ್ಲಿ ಈ ಯಂತ್ರ ಇದೆ. ಉದಯ ಕಿಚನೆಕ್ಸ್ಟ್ ಎದುರುಗಡೆ ಮತ್ತು ಅಯ್ಯಂಗಾರ್ ಬೇಕರಿಯ ಹತ್ತಿರದಲ್ಲಿ ಇರುವ ಕುಡಿಯುವ ನೀರಿನ ಯಂತ್ರ ಇದಾಗಿದ್ದು.. ಈ ಯಂತ್ರ ಸರ್ಕಾರದಿಂದ ಅಥವಾ ದಾನಿಗಳಿಂದ ಬಂದ ಯಂತ್ರ ಆಗಿರಬಹುದು ಆದರೇ ಅಧಿಕಾರಿಗಳ ನಿರ್ಲಕ್ಷ್ಯತನ ನೋಡಿ ಯಂತ್ರ ವರ್ಕ್ ಆಗದೇ ಇದ್ದರು ಕೂಡಾ ಹಾಗೆ ಬಿಟ್ಟಿದ್ದಾರೆ.. ಒಂದೋ ಯಂತ್ರವನ್ನು ಅಲ್ಲಿಂದ ಎತ್ತಂಗಡಿ ಮಾಡಿ ಅಥವಾ ಸಾರ್ವಜನಿಕರಿಗೆ ಉಪಯೋಗವಾಗುವಂತೆ ದಿನದ 24 ಗಂಟೆ ನೀರು ಬರುವಂತೆ ಮಾಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.