ಕಾಪು : ಕಳತ್ತೂರು ಅಯ್ಯಣ್ಣ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ
Posted On:
31-07-2025 07:47PM
ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಾಪು ತಾಲೂಕು ವತಿಯಿಂದ ಪಡು ಕಳತ್ತೂರು ಶ್ರೀ ಅಯ್ಯಣ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ನೆರವೇರಿತು.
ಶಾಲಾ ಸಂಚಾಲಕ ಪ್ರವೀಣ್ ಗುರ್ಮೆ ಮಾತನಾಡಿ, ಸುತ್ತಮುತ್ತಲಿನ ಪರಿಸರವನ್ನು ನಾವು ಕಾಪಾಡಿಕೊಂಡು ಬಂದಲ್ಲಿ ಮಾತ್ರ ಪರಿಸರದ ಅರಿವು ಮೂಡಲು ಸಾಧ್ಯ. ಮರಗಿಡಗಳನ್ನ ಬೆಳೆಸುವುದು, ನೀರನ್ನು ಉಳಿಸುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಅತ್ಯಗತ್ಯ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುತ್ಯಾರು ಪಂಚಾಯತ್ ಅಧ್ಯಕ್ಷ ಜನಾರ್ದನ ಆಚಾರ್ಯ ವಹಿಸಿದ್ದರು.
ಒಕ್ಕೂಟದ ಅಧ್ಯಕ್ಷರಾದ ಹರೀಶ್ ಕುಲಾಲ್, ಶಾಲಾ ಮುಖ್ಯ ಶಿಕ್ಷಕಿ ಶಾಂಭವಿ ಆಚಾರ್ಯ, ಪದಾಧಿಕಾರಿ ಪ್ರದೀಪ್, ಕೃಷಿ ಮೇಲ್ವಿಚಾರಕರಾದ ದೇವೇಂದ್ರ, ಅಧ್ಯಾಪಕ ವೃಂದ, ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಶಾಲೆಯ ಆವರಣದಲ್ಲಿ ಗಿಡ ನಾಟಿ ಮಾಡಿ, ಪರಿಸರ ಗೀತೆ, ಪ್ರಭಂದ ಸ್ಪರ್ಧೆ, ಎಲೆ ಗುರುತಿಸುವಿಕೆ, ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.