ಕಾಪು ಪುರಸಭಾ ವ್ಯಾಪ್ತಿಯ ಮಲ್ಲಾರು ಕೊಪ್ಪಲಂಗಡಿ ಅನಸೂಯ ಎನ್ ಕ್ಲೇವ್ ನಲ್ಲಿ ಕಸದ ಜತೆ ಕಳೆದು ಹೋಗಿರುವ 16 ಗ್ರಾಂ ತೂಕದ ಚಿನ್ನದ ಬ್ರಾಸ್ ಲೆಟ್ ನ್ನು ಅದರ ವಾರಸುದಾರರಿಗೆ ವಾಪಾಸು ನೀಡುವ ಮೂಲಕ ಕಾಪು ಪುರಸಭಾ ಕಾರ್ಮಿಕರು ಪ್ರಾಮಾಣಿಕತೆ ಮೆರೆದಿದ್ದಾರೆ. ವಾರಸುದಾರರು ನಗದು ಪುರಸ್ಕಾರ ನೀಡಿ ಗೌರವಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು.