ಸಮಾಜಸೇವೆಯ ಬಗ್ಗೆ ಆಸಕ್ತಿಯಿದ್ದು ಈಗಾಗಲೇ ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡಿರುವ ಬಂಟಕಲ್ಲ್ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಿಜಯ್ ಧೀರಜ್ ಬಂಟಕಲ್ಲ್ ಇಂದು ತಮ್ಮ ಹುಟ್ಟು ಹಬ್ಬದ ಅಂಗವಾಗಿ ಜೀವ ನಿಧಿ ಸಂಘಟನೆಯೊಂದಿಗೆ MY BIRTHDAY BLOOD DONATION ಎಂಬ ಪೋಸ್ಟರ್ ಅನ್ನು ಬಿಡುಗಡೆ ಮಾಡುವುದರೊಂದಿಗೆ ಪ್ರತಿಯೊಬ್ಬರೂ ನಿಮ್ಮ ಜನ್ಮದಿನದ ಸಂದರ್ಭದಲ್ಲಿ ದಯವಿಟ್ಟು ರಕ್ತದಾನ ಮಾಡಿ ಮತ್ತು ನೀವು 3 ಜನರಿಗೆ ಜೀವ ನೀಡುವ ಮೂಲಕ ಅದನ್ನು ಆಚರಿಸಿ ಎಂದು ವಿನಂತಿಸಿದ್ದಾರೆ.
ಇದಲ್ಲದೆ ತೀರಾ ಬಡ ಕುಟುಂಬದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳ ಒಂದು ವರ್ಷದ ಸಂಪೂರ್ಣ ಶಾಲೆಯ ಖರ್ಚು ವೆಚ್ಚದ ಜವಾಬ್ಧಾರಿ ತೆಗೆದುಕೊಂಡು ಅವರಿಗೆ ಈಗಾಗಲೇ 20 ಸಾವಿರದ ಚೆಕ್ ಹಸ್ತಾಂತರಿಸಿರುತ್ತಾರೆ.
ಇವರ ಈ ಕಾರ್ಯಕ್ಕೆ ಸರ್ವರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.