ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು ಪುರಸಭೆಯ ನೂತನ ಅಧ್ಯಕ್ಷರಿಗೆ ಜೆಸಿ ವತಿಯಿಂದ ಗೌರವಾಪ೯ಣೆ

Posted On: 30-10-2020 07:55PM

ಕಾಪು:- ಕಾಪು ಜೇಸಿಐ ನ ಪೂವ೯ ಅಧ್ಯಕ್ಷ ಹಾಗೂ ಪೂವ೯ ವಲಯಾಧಿಕಾರಿ ಯಾಗಿ ಉತ್ತಮ ಸೇವೆ ಸಲ್ಲಿಸಿದ ಕಾಪು ಪುರಸಭೆಯ ನೂತನ ಅಧ್ಯಕ್ಷ ಅನಿಲ್ ಕುಮಾರ್ ರವರನ್ನು ಜೇಸಿ ವತಿಯಿಂದ ಅ.30 ರಂದು ಶುಕ್ರವಾರ ಸನ್ಮಾನಿಸಲಾಯಿತು.

ಈ ಸಂದಭ೯ದಲ್ಲಿ ಮಾತನಾಡಿದ ಪೂವ೯ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ, ಜೇಸಿಯಲ್ಲಿ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಇವರು ಮಾದರಿ ಅಧ್ಯಕ್ಷರಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು.

ಈ ಸಂದಭ೯ದಲ್ಲಿ ಪುರಸಭಾ ಅಧ್ಯಕ್ಷರು ಕೃತಜ್ಞತೆ ವ್ಯಕ್ತಪಡಿಸಿದರು.ಈ ಸಂದಭ೯ದಲ್ಲಿ ರಾಷ್ಟ್ರೀಯ ಕಾಯ೯ನಿವಾ೯ಹಕ ಉಪಾಧ್ಯಕ್ಷ ಸಂದೀಪ್ ಕುಮಾರ್, ಪೂವ೯ ವಲಯಾಧ್ಯಕ್ಷರಾದ ರಾಕೇಶ್ ಕುಂಜೂರು, ಸಂತೋಷ್ ಜಿ, ಪೂವ೯ ವಲಯಾಧಿಕಾರಿಗಳಾದ ಸುಹಾನ್ ಸಾಸ್ತಾನ, ಸತೀಶ್ ಪೂಜಾರಿ, ಸೌಮ್ಯ ರಾಕೇಶ್, ಸುಧಾಕರ್ ಕಾಕ೯ಳ,ರಾಘವೇಂದ್ರ ಪ್ರಭು,ಕವಾ೯ಲು, ಆಡಳಿತ ವಿಭಾಗದ ನಿದೇ೯ಶಕ ರಾಯನ್ ಕ್ರಾಸ್ತಾ ಮುಂತಾದವರಿದ್ದರು