ಪಡುಬಿದ್ರಿ : ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಗ್ರಾಮಾಭಿವೃದ್ಧಿಯಲ್ಲಿ ಗ್ರಾ. ಪಂ. ಸದಸ್ಯರ ಜವಾಬ್ದಾರಿಗಳು ಕಾರ್ಯಾಗಾರ
Posted On:
01-02-2021 06:00PM
ಪಡುಬಿದ್ರಿ : ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (NSCDF) ಮತ್ತು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಗ್ರಾಮಾಭಿವೃದ್ಧಿಯಲ್ಲಿ ಗ್ರಾ. ಪಂ. ಸದಸ್ಯರ ಜವಾಬ್ದಾರಿಗಳು ಕುರಿತಾದ ಒಂದು ದಿನದ ಕಾರ್ಯಾಗಾರ ಉಡುಪಿ ಜಿಲ್ಲೆಯ ಪಡುಬಿದ್ರಿ ಸುಜ್ಲೋನ್ ಆರ್ & ಆರ್ ಕೊಲೊನಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸಿವಿಲ್ ಹಿರಿಯ ನ್ಯಾಯಾಧೀಶೆ ಶ್ರೀಮತಿ ಕಾವೇರಿ ಮಾತನಾಡಿ ಇದೀಗ ಚುನಾಯಿತರಾದ ನೀವುಗಳು ಕಾನೂನಿನ ಯಾವ ಕಾಯಿದೆ ಅಡಿಯಲ್ಲಿ ಆಯ್ಕೆಯಾಗಿದ್ದೀರಿ, ನಿಮ್ಮ ಜವಾಬ್ದಾರಿಗಳು ಏನು? ಜನ ಯಾಕಾಗಿ ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ ನಿಮ್ಮ ಕರ್ತವ್ಯಗಳು ಏನು ? ಗ್ರಾಮದ ಯಾವ ಯಾವ ಕಾರ್ಯಗಳಲ್ಲಿ ತಾವು ತೊಡಗಿಕೊಳ್ಳಬೇಕು ಎಂಬುದರ ಸ್ಪಷ್ಟ ಚಿತ್ರಣ ನಿಮ್ಮಲ್ಲಿ ಇದ್ದಾಗ ಮಾತ್ರ ಒಂದು ಗ್ರಾಮವನ್ನು ಸುಂದರ ಗ್ರಾಮವನ್ನಾಗಿಸ ಬಹುದು ಎಂದು ಹೇಳಿದರು.
ಮುಖ್ಯ ಅತಿಥಿ ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿವೇಕಾನಂದ ವಿ. ಗಾಂವ್ಕರ್ ಮಾತನಾಡಿ ಇಲ್ಲಿ ಪಾಲ್ಗೊಂಡ ತಾವುಗಳು ಅದೃಷ್ಟ ಶಾಲಿಗಳು ಭಾಗ್ಯ ಶಾಲಿಗಳು ಯಾಕೆಂದರೆ ಇದೊಂದು ರಾಜ್ಯದಲ್ಲೇ ಪ್ರಥಮ ಮಾಹಿತಿ ಕಾರ್ಯಾಗಾರ ಎಂದು ಅಭಿಪ್ರಾಯ ಪಟ್ಟರು.
NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಅಧ್ಯಕ್ಷತೆ ವಹಿಸಿದ್ದರು. KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ಸುಜ್ಲೋನ್ ಆರ್ ಆರ್ ಕಾಲೋನಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮಾನಾಥ ಕೆ.ಆರ್. ಉಪಸ್ಥಿತರಿದ್ದರು.
ಬಳಿಕ ಮಕ್ಕಳ ಅಭಿವೃದ್ಧಿಯಲ್ಲಿ ಗ್ರಾಮಪಂಚಾಯತ್ ಸದಸ್ಯರ ಪಾತ್ರ ಕುರಿತಾಗಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜಾ, ಗ್ರಾಮಪಂಚಾಯತ್ ಸದಸ್ಯರುಗಳ ಕರ್ತವ್ಯ ಮತ್ತು ಅಧಿಕಾರ ಕುರಿತು ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮಾನ್ಯತೆಪಡೆದ ಸಂಪನ್ಮೂಲ ಜವವಂತ ರಾವ್ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದಲ್ಲಿ ಪಡುಬಿದ್ರಿ, ಫಲಿಮಾರು, ಹೆಜಮಾಡಿ, ತೆಂಕ ಎರ್ಮಾಳ್ ಮತ್ತು ಬಡ ಎರ್ಮಾಳ್ ಗ್ರಾಮಪಂಚಾಯತ್ ಸದಸ್ಯರು ಭಾಗವಹಿಸಿದ್ದರು.