ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉದ್ಯಮಿ ಮನೋಹರ ಎಸ್ ಶೆಟ್ಟಿ ದಂಪತಿಗಳಿಗೆ : ಕಾಪು ಬಂಟರ ಸಂಘದಿಂದ ಸನ್ಮಾನ New

Posted On: 10-08-2025 08:47AM

ಕಾಪು : ಕಳೆದ 33 ವರ್ಷಗಳ ಕಾಲ ಕಾಪು ಬಂಟರ ಸಂಘದ 12 ಗ್ರಾಮಗಳ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿದ ದಾನಿ, ಕಾಪು ಶ್ರೀ ಲಕ್ಷ್ಮಿ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಹರ ಎಸ್ ಶೆಟ್ಟಿ ಮತ್ತವರ ಪತ್ನಿ ಅನುರಾಧ ಮನೋಹರ್ ಶೆಟ್ಟಿ ಇವರನ್ನು ಕಾಪು ಬಂಟರ ಸಂಘದ ಮಹಾಸಭೆ ಮತ್ತು "ಆಟಿಯ ನೆನಪು" ಹಾಗೂ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.

ಉದ್ಯಮಿ, ಅನಿವಾಸಿ ಭಾರತೀಯ ಮಲ್ಲಾರು ಶಶಿಧರ ಕೆ. ಶೆಟ್ಟಿ ಅಭಿನಂದಿಸುತ್ತಾ, ಸುಧೀರ್ಘಕಾಲದ ಭಾಗ್ಯ ಅವರಿಗೆ ದೊರೆತಿದೆ, ಇನ್ನೂ ಬಹಳಷ್ಟು ಕಾಲ ಈ ಅತ್ಯಂತ ಪುಣ್ಯದ ಕಾಯಕ ಮಾಡುವ ಅವಕಾಶ ದೇವರು ಒದಗಿಸಲಿ ಎಂದರು.

ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಔದ್ಯೋಗಿಕ ಹಾಗೂ ಕೃಷಿ ಸೇವಾ ಕ್ಷೇತ್ರದಲ್ಲಿ ಅವರ ಸೇವೆ ಅನುಪಮ ಎಂಬ ನೆಲೆಯಲ್ಲಿ ಗುರುತಿಸುತ್ತಿದ್ದೇವೆ ಎಂದು ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ ಅವರು ಪ್ರಸ್ತಾವನೆ ಮಾಡಿದರು.

ಈ ಸಂದರ್ಭದಲ್ಲಿ ಬಂಟರ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಬಂಟ ಸಮಾಜ ಬಾಂಧವರು ಉಪಸ್ಥಿತರಿದ್ದರು.