ಬಿರುವೆರ್ ಬ್ರದಸ್೯ ಹೆಜಮಾಡಿ ತಂಡದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಹೆಜಮಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ
Posted On:
29-03-2021 05:39PM
ಅಧಿಕಾರ ವಿಕೇಂದ್ರೀಕರಣದ ಮೂಲಕ ಸಾಮಾನ್ಯ ಜನರಿಗೂ ಜನಸೇವೆಯ ಭಾಗ್ಯ ನೀಡಿದೆ ಗ್ರಾಮಪಂಚಾಯತ್. ಆಯ್ಕೆಯಾದ ಸದಸ್ಯರು ತಮ್ಮ ಕಾರ್ಯ ವ್ಯಾಪ್ತಿಗೆ ಅನುಸಾರವಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಆ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಎಂದು
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಹಿಂದೂ ಧಾರ್ಮಿಕ ಧರ್ಮದಾಯ ದತ್ತಿ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಹೆಜಮಾಡಿ ಬಿಲ್ಲವ ಸಂಘದ ವಠಾರದಲ್ಲಿ ಜರಗಿದ ಬಿರುವೆರ್ ಬ್ರದಸ್೯ ಹೆಜಮಾಡಿ ತಂಡದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಹೆಜಮಾಡಿ ಗ್ರಾಮ ಪಂಚಾಯತ್ ನ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಸದಸ್ಯರಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಶುಭಕೋರಿ ಮಾತನಾಡಿದರು.
ಸನ್ಮಾನ : ಹೆಜಮಾಡಿ ಗ್ರಾಮ ಪಂಚಾಯತ್ ನ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಸದಸ್ಯರನ್ನು, ಪುಷ್ಪರಾಜ್ ಅಮೀನ್ ನಡಿಕುದ್ರು ವಾಯು ಮತ್ತು ಜಲ ಬಲ ವಿಜ್ಞಾನ ಸಂಶೋಧಕ, ಮಂಗಳೂರು ವಿಶ್ವವಿದ್ಯಾನಿಲಯದ 2020 ಸೆಪ್ಟೆಂಬರ್ ನಲ್ಲಿ ನಡೆಸಿದ ಬಿಸಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ 6ನೇ ರ‍್ಯಾಂಕ್ ಗಳಿಸಿದ ಪ್ರತಿಮಾ ಪಿ. ಕೋಟ್ಯಾನ್, ಬಿರುವೆರ್ ಬ್ರದಸ್೯ ಹೆಜಮಾಡಿಯ ಸ್ಥಾಪಕ ಅಧ್ಯಕ್ಷರಾದ ಶ್ರೀಧರ್ ಸುವರ್ಣರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಜಮಾಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ತಾಲೂಕು ಪಂಚಾಯತ್ ಸದಸ್ಯರಾದ ನೀತಾ ಗುರುರಾಜ್, ಬಿರುವೆರ್ ಬ್ರದಸ್೯ ಹೆಜಮಾಡಿಯ ಸ್ಥಾಪಕ ಅಧ್ಯಕ್ಷರಾದ ಶ್ರೀಧರ್ ಸುವರ್ಣ, ಮಂಗಳೂರು ಬಿರುವೆರ್ ಕುಡ್ಲದ ವಕ್ತಾರ ಲಕ್ಷ್ಮೀಶ್, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಲೋಕೇಶ್ ಅಮೀನ್, ಹೆಜಮಾಡಿಯ ಉದ್ಯಮಿ ಸಂದೇಶ್ ಶೆಟ್ಟಿ, ಬಿಜೆಪಿ ಕಾಪು ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಹೆಜಮಾಡಿ ನಾರಾಯಣಗುರು ಮಂದಿರದ ಅರ್ಚಕರಾದ ಹರೀಶ್ ಶಾಂತಿ ಮುಂಬೈ, ಪಡುಬಿದ್ರಿ ಬಿಜೆಪಿ ಯುವ ಮೋರ್ಚಾ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಕೀರ್ತನ್ ಪೂಜಾರಿ, ಬಿರುವೆರ್ ಬ್ರದಸ್೯ ಹೆಜಮಾಡಿಯ ನೂತನ ಅಧ್ಯಕ್ಷರಾದ ರೀತೇಶ್ ಉಪಸ್ಥಿತರಿದ್ದರು.
ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ, ವಿಠಲ ನಾಯಕ್ ಕಲ್ಲಡ್ಕರಿಂದ ಗೀತ ಸಾಹಿತ್ಯ ಸಂಭ್ರಮ ಜರಗಿತು. ನೀಲೇಶ್ ಹೆಜಮಾಡಿ ಸ್ವಾಗತಿಸಿ, ಮನೋಹರ್ ಹೆಜಮಾಡಿ ಪ್ರಾಸ್ತಾವಿಕ ಮಾತನಾಡಿ, ಮೋಹನ್ ಸುವರ್ಣ ಮುಲ್ಕಿ ನಿರೂಪಿಸಿ, ಗುರುಪ್ರಸಾದ್ ವಂದಿಸಿದರು.