ಪ್ರತಿವರ್ಷವೂ ಕೋಮು ಸೌಹಾರ್ದತೆಗೆ ಸಾಕ್ಷಿಯಾಗುತ್ತಿರುವ ಉದ್ಯಾವರ ಸಂಪಿಗೆ ನಗರದ ಉರೂಸ್ ಮುಬಾರಕ್
Posted On:
02-04-2021 12:23PM
ಕಾಪು : ಸರ್ವ ಧರ್ಮ ಭಾವೈಕ್ಯತೆಗೆ ಸಾಕ್ಷಿಯಾದ ಇತಿಹಾಸ ಪ್ರಸಿದ್ಧ ಸೂಫಿ ಶಹೀದ್ ಹಝ್ರತ್ ಫಖ್ರು ಶಹೀದ್ ವಲೀಯುಲ್ಲಾಹೀ ದರ್ಗಾ ಶರೀಫ್ ಉದ್ಯಾವರ ಸಂಪಿಗೆ ನಗರದ ಉರೂಸ್ ಮುಬಾರಕ್ ಏಪ್ರಿಲ್ 3 ಮತ್ತು 4 ರಂದು ಡಾ| ಖಾಝಿ ರಫಿಲ್ ಸಾಹೇಬ್ ಹಾಗೂ ಮುಕ್ತರ್ ಅಹಮ್ಮದ್ ಸಾಹೇಬ್, ಅಧ್ಯಕ್ಷರು ದರ್ಗಾ ಕಮಿಟಿ, ಸಂಪಿಗೆ ನಗರ ಉದ್ಯಾವರ ಇವರ ನೇತೃತ್ವದಲ್ಲಿ ನಡೆಯಲಿದೆ.
ಏಪ್ರಿಲ್ 3, ಶನಿವಾರ ಮಧ್ಯಾಹ್ನ 2ಕ್ಕೆ ಬೃಹತ್ ಝಿಕ್ರ್ ಮಜ್ಲೀಸ್, ಸಂಜೆ 3ಕ್ಕೆ ಸಂದಲ್, ಮಗ್ರಿಬ್ ನಮಾಜಿನ ನಂತರ ಫಕ್ರೆ ಆಲಂ ರಝ್ವಿ ಮುಂಬಾಯಿ ಇವರಿಂದ (ನಾಥೇ ಶರೀಫ್) ಮಹ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ, ದಾರುಲ್ ಮುಸ್ತಫ ಮೋರಲ್ ಅಕಾಡಮಿ ನಚ್ಚಬೆಟ್ಟು ಇವರಿಂದ ಪ್ರವಚನ ಅಲ್ ಹಾಜಿ ಸೆಲೀಂ ಮದನಿ ದಾರುಲ್ ಅಮಾನ್ ಎಲ್ಲೂರು ದುವಾ ಮಾಡಲಿದ್ದಾರೆ.
ಏಪ್ರಿಲ್ 4, ಆದಿತ್ಯವಾರ ಬೆಳಿಗ್ಗೆ 10ಕ್ಕೆ ಮಜ್ಲೀಸ್ ಮೌಲೂದ್, ಮಧ್ಯಾಹ್ನ 12 ರಿಂದ ಸಂಜೆ 3ರವರೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಪ್ರತಿ ವರ್ಷವು ಆರ್ ಜೆ ಎರೋಲ್ ಕುಟುಂಬಸ್ಥರಿಗೆ ಸೇರಿದ ಜಾಗದಲ್ಲಿ ಈ ಸೇವೆಯು ನಡೆಯುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.