ಕಾಪು : ಮಹೇಶ ಕುಲಾಲ್ ಗೋರೆಲು ಇವರ ಶಸ್ತ್ರಚಿಕಿತ್ಸೆ ಗೆ ನೆರವು ನೀಡುವಂತೆ ಕುಲಾಲ ಸಂಘ ಪೆರ್ಡೂರು(ರಿ) ಮತ್ತು ಕುಲಾಲ ಯುವವೇದಿಕೆ ಕಾಪು ಘಟಕ ಮಾಡಿಕೊಂಡ ವಾಟ್ಸಾಪ್ ಮನವಿಗೆ ಸ್ಪಂದಿಸಿ ಒಟ್ಟುಗೂಡಿದ ನಗದು ಮೊತ್ತವನ್ನು ಏಪ್ರಿಲ್ 4, ಆದಿತ್ಯವಾರ ಕುಲಾಲ ಸಂಘದ ಕಾರ್ಯಕಾರಿ ಮಂಡಳಿಯ ಮಾಸಿಕ ಸಭೆಯಲ್ಲಿ ಅವರ ಮನೆಯವರಿಗೆ ಅಧ್ಯಕ್ಷರಾದ ಐತು ಕುಲಾಲ್ ಕನ್ಯಾನ ಮತ್ತು ಇತರ ಪದಾಧಿಕಾರಿಗಳ ಸಮ್ಮುಖದಲ್ಲಿ ಹಸ್ತಾ0ತರಿಸಲಾಯಿತು.
ವಿವಿಧ ಸಂಘಸಂಸ್ಥೆಗಳಿಂದ 80,000₹ ,google pay/account pay,ನಗದು ರೂಪದಲ್ಲಿ 1,05,174₹ ಇದುವರೆಗೆ ಒಟ್ಟುಗೂಡಿದ್ದು, ಒಟ್ಟು 1,85,174₹ ಧನ ಸಹಾಯವನ್ನು ಮಾಡಿದ ಎಲ್ಲ ಸಹೃದಯರನ್ನು ಕುಲಾಲ ಸಂಘ ಪೆರ್ಡೂರು ಆತ್ಮೀಯವಾಗಿ ಧನ್ಯವಾದವನ್ನು ಅರ್ಪಿಸುತ್ತಿದೆ. ಇನ್ನು ಮುಂದೆ ಧನಸಹಾಯ ನೀಡುವವರು ನೇರವಾಗಿ ಮಹೇಶ್ ಕುಲಾಲ್ ಅಕೌಂಟ್ ಗೆ ನೆರವು ನೀಡಬಹುದು ಎಂದು ಕುಲಾಲ ಸಂಘ ಪೆರ್ಡೂರು(ರಿ.) ಕುಲಾಲ ಯುವವೇದಿಕೆ ಕಾಪು ಘಟಕ ವಿನಂತಿಸಿದ್ದಾರೆ.