ಕಾಪು : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಬೆಳ್ಮಣ್ಣು ಸಭಾಭವನದಲ್ಲಿ ಏಪ್ರಿಲ್ 11, ಆದಿತ್ಯವಾರ ಪೂರ್ವಾಹ್ನ ಘಂಟೆ 9.00ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೋತ್ಸವ, ಸಭಾಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಏಪ್ರಿಲ್ 11, ಆದಿತ್ಯವಾರ ಬೆಳಿಗ್ಗೆ ಘಂಟೆ 9 ರಿಂದ ಪೂಜಾರಂಭ, ಬೆಳಿಗ್ಗೆ ಘಂಟೆ 10-30ಕ್ಕೆ ಮಹಾಪೂಜೆ, ಬೆಳಿಗ್ಗೆ ಘಂಟೆ 11ರಿಂದ ಸಭಾಕಾರ್ಯಕ್ರಮ, ಮಧ್ಯಾಹ್ನ ಘಂಟೆ 1ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಸಭಾ ಕಾರ್ಯಕ್ರಮದಲ್ಲಿ ಸತೀಶ್ ಎರ್ಮಾಳ್
ಅಧ್ಯಕ್ಷರು, ಬ್ರಹ್ಮಶ್ರೀ ನಾ.ಗು.ಸ. ಸೇವಾ ಸಂಘ (ರಿ.) ಬೆಳ್ಳಣ್ಣು, ಎಸ್. ಕೆ. ಸಾಲ್ಯಾನ್ ಉದ್ಯಮಿ, ಶ್ರೀ ಕೃಷ್ಣ ಸಮೂಹ ಸಂಸ್ಥೆಗಳು, ಸುನೀಲ್ ಕುಮಾರ್ ಶಾಸಕರು ಕಾರ್ಕಳ ವಿಧಾನ ಸಭಾ ಕ್ಷೇತ್ರ, ಡಾ| ವಿಜಯ ಕುಮಾರ್ ಮಕ್ಕಳ ಶಸ್ತ್ರ ಚಿಕಿತ್ಸಾ ತಜ್ಞರು, ಕೆ.ಎಂ.ಸಿ. ಮಣಿಪಾಲ್, ಶ್ರೀ ಪರಮಾನಂದ ಸಾಲ್ಯಾನ್ ರಂಗ ನಿರ್ದೇಶಕರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಡಾ| ಬಾಲಕೃಷ್ಣ ರಾವ್ ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಣ್ಣು, ಡಾ| ಶ್ವೇತಾ ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ನಂದಳಿಕೆ, ಡಾ| ಸತೀಶ್ ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಚೇರಿಪೇಟೆ, ಡಾ| ಗುರುದತ್ ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಇನ್ನಾ,
ಜನಪ್ರತಿನಿಧಿಗಳಾಗಿ ಆಯ್ಕೆಗೊಂಡ ಬೆಳ್ಳಣ್ಣು ಪಂಚಾಯತ್‌ನ ಎಲ್ಲಾ ಸದಸ್ಯರಿಗೂ ಹಾಗೂ ಬೆಳ್ಮಣ್ಣು ಸಂಘದ ವ್ಯಾಪ್ತಿಯ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಬಿಲ್ಲವ ಸಮಾಜ ಬಾಂಧವರಿಗೂ ಅಭಿನಂದನಾಪೂರ್ವಕ ಗೌರವ ಸಮರ್ಪಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.