ಏಪ್ರಿಲ್ 10, ಶನಿವಾರ : ಶ್ರೀ ಗುರು ನಾಸಿಕ್ ಗ್ರೂಪ್ ಶಿರ್ವ ಇದರ 13ನೇ ವರ್ಷದ ವಾರ್ಷಿಕೋತ್ಸವ
Posted On:
07-04-2021 03:14AM
ಕಾಪು : ಶ್ರೀ ಗುರು ನಾಸಿಕ್ ಗ್ರೂಪ್ ಶಿರ್ವ ಇದರ 13ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಏಪ್ರಿಲ್ 10, ಶನಿವಾರ ಬ್ರಹ್ಮಶ್ರೀ ನಾರಾಯಣ ಗುರುಮಂದಿರ ಚೆಕ್ ಪಾದೆ, ಶಿರ್ವ ಇಲ್ಲಿ ನಡೆಯಲಿದೆ.
ಬೆಳಿಗ್ಗೆ 10 ರಿಂದ ಶನಿಕಥಾಪಾರಾಯಣ, ಮಧ್ಯಾಹ್ನ 12:30 ಕ್ಕೆ ಅನ್ನಸಂತರ್ಪಣೆ, ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ 7.30ರಿಂದ ಸಭಾ ಕಾರ್ಯಕ್ರಮ ಜರಗಲಿದ್ದು ಉದ್ಘಾಟಕರಾಗಿ ಮಹೇಶ್ ಶಾಂತಿ ಹೆಜಮಾಡಿ, ಮುಖ್ಯ ಅತಿಥಿಗಳಾಗಿ ಬಿಲ್ಲವ ಪರಿಷತ್ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ನವೀನ್ ಆಮೀನ್ ಶಂಕರಪುರ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಮಿತಿ ಶಿರ್ವ ಇದರ ಅಧ್ಯಕ್ಷರಾದ ದೇವಿಪ್ರಸಾದ್ ಪೂಜಾರಿ, ದಿಕ್ಸೂಚಿ ಭಾಷಣಕಾರರಾಗಿ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ ಸರ್ ಭಾಗವಹಿಸಲಿದ್ದಾರೆ.
ಇದೇ ಸಂದರ್ಭ ಗುರುವಂದನಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ನಡೆಯಲಿದ್ದು, ರಾತ್ರಿ 9:30 ರಿಂದ ನಮ್ಮ ಕಲಾವಿದೆರ್ ಬೆದ್ರ ತಂಡದ ಸಾಮಾಜಿಕ ಹಾಸ್ಯಮಯ ನಾಟಕ ಕುಸಲ್ದ ಗೊಬ್ಬು ಪ್ರದರ್ಶನವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.