ಕಾಪು : ಏಪ್ರಿಲ್ 12, ಸೋಮವಾರ ಮೊದಲ್ಗೊಂಡು ಏಪ್ರಿಲ್ 18, ಭಾನುವಾರ ಪರ್ಯಂತ ಶ್ರೀ ಕ್ಷೇತ್ರ ಉಂಡಾರು ಶ್ರೀವಿಷ್ಣುಮೂರ್ತಿ ದೇವರ ವಾರ್ಷಿಕ ಶ್ರೀಮನ್ಮಹಾರಥೋತ್ಸವವು ಪರಮಪೂಜ್ಯ
ಶ್ರೀಶ್ರೀಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರ
ದಿವ್ಯ ಉಪಸ್ಥಿತಿಯಲ್ಲಿ ವೇದಮೂರ್ತಿ ಪುತ್ತೂರು ಮಧುಸೂದನ ತಂತ್ರಿಯವರ ನೇತೃತ್ವದಲ್ಲಿ ಅಗಮೋಕ್ತ ವಿಧಿ-ವಿಧಾನಗಳೊಂದಿಗೆ ಜರಗಲಿರುವುದು. ಏಪ್ರಿಲ್ 09 ರಿಂದ ಏಪ್ರಿಲ್ 15 ರ ವರೆಗೆ ಶ್ರೀಮದ್ಭಾಗವತ ಸಪ್ತಾಹ ನಡೆಯಲಿದೆ.
ಏಪ್ರಿಲ್ 09 ರಿಂದ ಏಪ್ರಿಲ್ 15 ರ ವರೆಗೆ ಪ್ರತಿದಿನ ಸಾಯಂಕಾಲ 4.30 ರಿಂದ 6.30ರ ವರೆಗೆ ವಿದ್ವಾನ್ ಡಾ.ಉದಯಕುಮಾರ್ ಸರಳತ್ತಾಯ ರಿಂದ ಶ್ರೀಮದ್ಭಾಗವತ ಕಥಾ ಪ್ರವಚನ ನಡೆಯಲಿರುವುದು.
ಏಪ್ರಿಲ್ 12, ಸೋಮವಾರ ಸಾಯಂಕಾಲ 6ರಿಂದ ಫಲನ್ಯಾಸಪೂರ್ವಕ ಮುಹೂರ್ತ ಬಲಿ, ಅಂಕುರಾರೋಪಣ, ಸಂಜೆ: 6.30 ರಿಂದ 7.30 ಶ್ರೀ ವಿಷ್ಣು ಭಗಿನಿ ಭಜನಾ ಮಂಡಳಿ ಉಂಡಾರು ಹಾಗೂ 7.30 ರಿಂದ 8.30 ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಉಂಡಾರು, ಇವರಿಂದ ಭಜನೆ.
ಏಪ್ರಿಲ್ 13, ಮಂಗಳವಾರ ಮೇಷ ಸಂಕ್ರಮಣ: ಪ್ರಾತ: 8-15ಕ್ಕೆ ಧ್ವಜಾರೋಹಣ. ಸಾಯಂಕಾಲ 7-30ಕ್ಕೆ ಬಲಿ. ರಾತ್ರಿ 9 ಕ್ಕೆ ಮಹಾರಂಗಪೂಜೆ, ಭೂತಬಲಿ, ಸಂಜೆ: 6.30 ರಿಂದ 7.30 ಶ್ರೀವಿಷ್ಣುವಲ್ಲಭ ವಿಶ್ವಹಿಂದೂ ಪರಿಷತ್ ಇನ್ನಂಜೆ ಘಟಕ ಹಾಗೂ 7.30 ರಿಂದ 8.30 ಶ್ರೀ ಧೂಮಾವತಿ ಭಜನ ಮಂಡಳಿ ಕಲ್ಯಾಲು, ಇವರಿಂದ ಭಜನೆ,
ರಾತ್ರಿ 9ಕ್ಕೆ ವಿಧಾತ್ರಿ ಕಲಾವಿದೆರ್ ಕೈಕಂಬ-ಕುಡ್ಲ ಅವರಿಂದ ವಿಜಯಕುಮಾರ್ ಕೊಡಿಯಾಲ್‌ಬೈಲ್ ರಚನೆ ಮತ್ತು ನಿರ್ದೇಶನದ ತುಳು ಹಾಸ್ಯ ನಾಟಕ ಒರಿಯರ್ದೊರಿ ಅಸಲ್, ಶಶಿಧರ ಕೆ.ಶೆಟ್ಟಿ ಮಂಡೇಡಿ ಮತ್ತು ಕಲಾಭಿಮಾನಿಗಳ ಪ್ರಾಯೋಜಕತ್ವದಲ್ಲಿ ನಡೆಯಲಿದೆ.
ಏಪ್ರಿಲ್ 14, ಬುಧವಾರ ಸಾಯಂಕಾಲ 7-30ಕ್ಕೆ ತಪ್ಪಂಗಾಯಿ ಬಲಿ, ಕಟ್ಟೆಪೂಜೆಗಳು ಸಂಜೆ 6.30 ರಿಂದ 7.30 ಶ್ರೀ ನಾರಾಯಣ ಗುರು ಭಜನಾ ಮಂಡಳಿ ಇನ್ನಂಜೆ ಹಾಗೂ 7.30 ರಿಂದ 8.30 ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ, ಮಡುಂಬು, ಅವರಿಂದ ಭಜನೆ. ಸಂಜೆ 6.30 ಶ್ರೀ ರವಿಶಂಕರ ಗುರೂಜಿಯವರ ಶಿಷ್ಯರಾದ ಸ್ವಾಮಿ ಸೂರ್ಯಪಾದರಿಂದ ಸತ್ಸಂಗ (ಸಹಯೋಗ: ಜೀವನಕಲಾ ಸಂಸ್ಥೆ, ಇನ್ನಂಜೆ) ರಾತ್ರಿ 9 ರಿಂದ ಶಾಂಭವೀ ನೃತ್ಯನಿಕೇತನ ಕಾಪು ಇದರಿಂದ ನೃತ್ಯ ವೈವಿಧ್ಯ. ಪ್ರಾಯೋಜಕರು: ಶ್ರೀ ಉದಯ ಟಿ. ಮತ್ತು ಸಹೋದರರು ಇನ್ನಂಜೆ.
ಏಪ್ರಿಲ್ 15, ಗುರುವಾರ ಪ್ರಾತ: 9ಕ್ಕೆ ಆಶ್ಲೇಷಾ ಬಲಿ, ಸಾಯಂಕಾಲ 7-30ಕ್ಕೆ ಬಲಿ, ಕಟ್ಟೆಪೂಜೆಗಳು.
ಸಂಜೆ 6.30 ರಿಂದ 7.30 ಶ್ರೀ ಅಶ್ವತ್ಥನಾರಾಯಣ ಭಜನಾ ಮಂಡಳಿ, ಮಜಲು ಹಾಗೂ 7.30 ರಿಂದ 8.30 ಶ್ರೀದೇವಿ ಭಜನಾ ಮಂಡಳಿ ಮಂಡೇಡಿ, ಅವರಿಂದ ಭಜನೆ ರಾತ್ರಿ 7-30ಕ್ಕೆ ಶ್ರೀ ವಿಷ್ಣುಮೂರ್ತಿ ಹಯವದನ ಸ್ವಾಮಿ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳಿಂದ ಕಾರ್ಯಕ್ರಮಗಳು.ರಾತ್ರಿ 9 ಕ್ಕೆ ಶ್ರೀಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ಯಕ್ಷಗಾನ ಶುಕ್ರನಂದನೆ.
ಏಪ್ರಿಲ್ 16, ಶುಕ್ರವಾರ ಪ್ರಾತ: 8-30ಕ್ಕೆ ಶ್ರೀಶ್ರೀಗಳವರಿಂದ ಸಂಸ್ಥಾನ ದೇವರಿಗೆ ಮಹಾಪೂಜೆ 9ಕ್ಕೆ 108 ಕಾಯಿ ಗಣಯಾಗದ ಪೂರ್ಣಾಹುತಿ
ಪೂರ್ವಾಹ್ನ 10-30ಕ್ಕೆ ಮಹಾಪೂಜೆ, 11-45 ಕ್ಕೆ ರಥಾರೋಹಣ, ಮಧ್ಯಾಹ್ನ 12-30ಕ್ಕೆ ಮಹಾಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.30ಕ್ಕೆ ಉಡುಪಿಯ ಪ್ರಸಿದ್ಧ ಕಲಾವಿದರಾದ ವಿ. ಓಬು ಸೇರಿಗಾರರ ಮೊಮ್ಮಗಳು ಅಕ್ಷತಾ ದೇವಾಡಿಗ ರಿಂದ ಸ್ಯಾಕ್ರೋಫೋನ್ ವಾದನ, ಸಂಜೆ 7 ಶ್ರೀಭೂತರಾಜರಿಗೆ ವಿಶೇಷ ಪೂಜೆ ಶ್ರೀಮನ್ಮಹಾರಥೋತ್ಸವ ಮಹಾಭೂತಬಲಿ, ಶಯನೋತ್ಸವ, ಕವಾಟಬಂಧನ.
ಏಪ್ರಿಲ್ 17, ಶನಿವಾರ ಪ್ರಾತ 7 ಕ್ಕೆ ಕವಾಟೋದ್ಘಾಟನೆ, ಸಾಯಂಕಾಲ 6-30ಕ್ಕೆ ಅವಚ್ಛತಾನ-ಧ್ವಜಾವರೋಹಣ-ಪೂರ್ಣಾಹುತಿ- ಮಹಾಮಂತ್ರಾಕ್ಷತೆ ಸಂಜೆ 6.30 ರಿಂದ 7.30 ಇನ್ನಂಜೆ ಯುವತಿಮಂಡಳಿ, ಇನ್ನಂಜೆ ಹಾಗೂ 7.30 ರಿಂದ 8.30 ಶ್ರೀ ವಿಠೋಭ ಭಜನಾ ಮಂಡಳಿ, ಗೋಳಿಕಟ್ಟೆ, ಇವರಿಂದ ಭಜನೆ, ರಾತ್ರಿ 9 ಕ್ಕೆ ಇನ್ನಂಜೆ ಯುವಕ ಮಂಡಳಿಯ ಸದಸ್ಯರಿಂದ ಸಾಮಾಜಿಕ ಹಾಸ್ಯ ತುಳು ನಾಟಕ ಅಮ್ಮೆರ್ ನೆರ್ಪೆರ್ ಪ್ರದರ್ಶನವಾಗಲಿದೆ.
ಏಪ್ರಿಲ್ 18, ಭಾನುವಾರ ಬೆಳಗ್ಗೆ 6 ರಿಂದ ಗಣಯಾಗ ಮಹಾಸಂಪ್ರೋಕ್ಷಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.