ಪ್ರತಿಭಾನ್ವಿತೆಯ ಚಿಕಿತ್ಸೆಗೆ ನೆರವಾಗಿ
Thumbnail
ಕಾಪು : ಪ್ರತಿಭಾನ್ವಿತ ವಿದ್ಯಾರ್ಥಿನಿಯೊಬ್ಬಳು ಬಡತನದ ಬೇಗೆಯಲ್ಲಿ ಅನೇಕ ಕನಸಿನ ಮೂಟೆಗಳನ್ನು ಹೊರುವ ಸಂದರ್ಭದಲ್ಲಿ ಒಂದು ಭಾರವಾದ ಸಂಕಷ್ಟ ಅವಳಿಗೆ ಎದುರಾಗುತ್ತದೆ. ಈ ಹುಡುಗಿಯ ಹೆಸರು ಶ್ರಾವ್ಯ.ಜೆ.ಎಂ. ಅಂತಿಮ ಪದವಿ ಕಲಿಯುತ್ತಿರುವ ಹುಡುಗಿ. ಇವಳು ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕಾಯರಡ್ಕ ಜನತಾ ಕಾಲೋನಿ ಮನೆ ಶ್ರೀಮತಿ ರೇವತಿ ಹಾಗು ಜನಾರ್ಧನ ಪೂಜರಿಯವರ ಪ್ರಥಮ ಪುತ್ರಿ. ಇವಳು 2017 -18 ರಲ್ಲಿ ಶ್ರೀ ಗುರುದೇವ ಕಾಲೇಜುನಲ್ಲಿ Science (PCMC) ಮುಗಿಸಿ ಉಪ್ಪಿನಂಗಡಿಯ ಸರಕಾರಿ ಕಾಲೇಜುನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಳು. ದೇವರ ವಿಧಿಯಾಟದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಇವಳ ಚಿಕಿತ್ಸೆಗಾಗಿ 10 ಲಕ್ಷದಿಂದ 15 ಲಕ್ಷದವರೆಗೆ ಬೇಕಾಗುವುದು ಎಂದು ಮಣಿಪಾಲ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಈಗಾಗಲೇ 5 ಲಕ್ಷದವರೆಗೆ ಚಿಕಿತ್ಸೆಗೆ ಖರ್ಚು ಆಗಿದೆ. ಬಲಿಷ್ಠ ಬಿಲ್ಲವರು ವಾಟ್ಸಾಪ್ ತಂಡ ಇದಕ್ಕಾಗಿ ಶ್ರಮಿಸುತ್ತಿದೆ. ಈ ಬಡ ಕುಟುಂಬಕ್ಕೆ ಸಹಾಯ ಮಾಡುವವರು ಇದ್ದರೆ , ಈ ಕೆಳಗಿನ ಖಾತೆಗೆ ಧನ ಸಹಾಯ ಮಾಡಿ , ಇವಳ ಆರೋಗ್ಯವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. A/c NO. 01502200102672 IFSC code .CNRB0010150 Gogal pay No.8861337939 Sampath poojary Phone pay No.8861337939 Sampath poojary
20 May 2021, 10:53 AM
Category: Kaup
Tags: