ಉಪ್ಪೂರು : ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ - ವಯೋವಂದನ ಆತಿಥ್ಯ ಗೃಹದ "ಸೈಟ್ ಆಫೀಸ್" ಉದ್ಘಾಟನೆ
Thumbnail

ಉಡುಪಿ : ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ " ವಯೋವಂದನ ಆತಿಥ್ಯ ಗೃಹದ "ಸೈಟ್ ಆಫೀಸ್"  ಉದ್ಘಾಟನೆಯನ್ನು ಡಾ. ಪಾಂಗಾಳ ಸೀತಾರಾಮ ನಾಯಕ್ ರವರು ನೆರವೇರಿಸಿ ಮಾತನಾಡುತ್ತಾ, ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಸಮಾಜದ ಹಿರಿಯರ ಬಾಳಿಗೆ ಆಶಾಕಿರಣ ವಾಗಿದ್ದು, ಅವರ ಜೀವನ ಸಂಧ್ಯಾಕಾಲಕ್ಕೆ ಅತಿ ಅಗತ್ಯವಾದ ವಯೋವಂದನ ಆತಿಥ್ಯ ಗೃಹ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ. ಸಮಾಜದ ದಾನಿಗಳ ಸಹಕಾರದಿಂದ ಆದಷ್ಟು ಶೀಘ್ರ ಈ ಯೋಜನೆ ಲೋಕಾರ್ಪಣೆಗೊಳ್ಳಲಿ ಎಂದು ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಶಿವಮೊಗ್ಗದ ಉದ್ಯಮಿ  ಮಣೂರು ಪ್ರಕಾಶ್ ಪ್ರಭುರವರು, ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯದ ಜೊತೆಗೆ ರಾಷ್ಟ್ರ ಮೊದಲು ಎನ್ನುವ ಕಲ್ಪನೆಯೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿರುವುದು ಯುವ ಪೀಳಿಗೆಗೆ ಮೇಲ್ಪಂಕ್ತಿ ಹಾಕಿಕೊಟ್ಟಂತಾಗಿದೆ ಎಂದು ಶುಭ ಹಾರೈಸಿದರು.
ವೇದಮೂರ್ತಿ ಹರಿಪ್ರಸಾದ್ ಶರ್ಮಾ ರವರ ಪೌರೋಹಿತ್ಯದಲ್ಲಿ ಶ್ರೀ ಲಕ್ಷ್ಮಿ ಪೂಜೆಯನ್ನು ನೆರವೇರಿಸಲಾಯಿತು. 

ಈ ಸಂದರ್ಭದಲ್ಲಿ ದಾನಿಗಳಾದ ಮಂಗಳೂರಿನ ರಘುರಾಮ್ ಕಾಮತ್, ಚಂದ್ರ ಪ್ರಭಾಕಾಮತ್, ಉಡುಪಿಯ ಭಾರತ ವಿಕಾಸ ಪರಿಷತ್ ಪ್ರಮುಖರಾದ  ವಸಂತ ಭಟ್ ದಂಪತಿಗಳು, ಮಣಿಪಾಲದ ಭಾರತ ವಿಕಾಸ್ ಟ್ರಸ್ಟಿನ ಕಾರ್ಯದರ್ಶಿ ಜಗದೀಶ್ ಪೈ, ಬ್ರಹ್ಮಾವರದ ಬಾಲಕೃಷ್ಣ ಪೈ, ಉಡುಪಿಯ ಡಾ. ರಾಮಚಂದ್ರ ಕಾಮತ್ ಕಟ್ಟಡ ನಿರ್ಮಾಣ ಪರಿಸರದಲ್ಲಿ ವೃಕ್ಷಾರೋಪಣೆಗೈದರು. 

ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಆರ್ .ವಿವೇಕಾನಂದ ಶೆಣೈ ಯವರು ಸ್ವಾಗತಿಸಿ, ಪ್ರಸ್ತಾವನೆಗೈದರು.

ಉಡುಪಿ ಕಟಪಾಡಿಯ ತ್ರಿಶಾ ವಿದ್ಯಾ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ರವರು ವಯೋವಂದನ ಆತಿಥ್ಯ ಗೃಹ ನಿರ್ಮಾಣದ ಮಹತ್ವ, ಸಮಾಜದ ಸಹಭಾಗಿತ್ವ ಮತ್ತು ವೇದಿಕೆಯ ನೇತೃತ್ವದ ಬಗ್ಗೆ ಸವಿವರವಾಗಿ ಮಾತನಾಡಿದರು. 
ಅಮ್ಮುನ್ಜೆ ಶ್ರೀ ದಾಮೋದರ ದೇವಸ್ಥಾನದ ಆಡಳಿತ ಮೊಕ್ತೇಸರರರಾದ ವಿನೋದ್ ನಾಯಕ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವೇದಿಕೆಯ ಮಹತ್ವಕಾಂಕ್ಷಿ ಯೋಜನೆಗೆ ಶುಭ ಹಾರೈಸಿದರು.

ಕಟ್ಟಡ ನಿರ್ಮಾಣ ಕಾಮಗಾರಿಯ ಇಂಜಿನಿಯರ್ ಕಾಮಾಕ್ಷಿ ಕನ್ಸ್ಟ್ರಕ್ಷನ್ ನಿರ್ಮಾಣ ಸಂಸ್ಥೆಯ  ಸುಧೀರ್ ಕಾಮತ್ ರವರು ಕಟ್ಟಡ ನಿರ್ಮಾಣದ ರೂಪುರೇಷೆ ,ವಿನ್ಯಾಸದ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು.
 
ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಜಿ. ಸತೀಶ್ ಹೆಗ್ಡೆ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ, ಕಳೆದ 14 ವರ್ಷಗಳಲ್ಲಿ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ನಡೆಸಿಕೊಂಡು ಬರುತ್ತಿರುವ ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. 

ಜಿಎಸ್‌ಬಿ ಸಮಾಜ ಹಿತ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ರವರು ಕಾರ್ಯಕ್ರಮ ನಿರೂಪಿಸಿದರು.
ಕಾಪು ಹರೀಶ್ ನಾಯಕ್ ರವರು ವಂದಿಸಿದರು.

Additional image Additional image
15 Aug 2026, 05:38 PM
Category: Kaup
Tags: