ಕಾಪು : ಅನಂತ ಮಹಲ್ ವಾಣಿಜ್ಯ ಸಂಕೀರ್ಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ
Thumbnail

ಕಾಪು : 80 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾಪುವಿನ ಅನಂತ ಮಹಲ್ ವಾಣಿಜ್ಯ ಸಂಕೀರ್ಣ ಮುಂಭಾಗ ಜೇಸಿಐ ಕಾಪು ಘಟಕದ ಅಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು ಮುಖ್ಯ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣಗೈದು, ನೆರೆದಿದ್ದ ಅಂಗಡಿ ಮಾಲಕರಿಗೆ, ಸಿಬ್ಬಂದಿಗಳಿಗೆ ಮತ್ತು ಸಾರ್ವಜನಿಕರಿಗೆ ಶುಭಾಶಯಗಳನ್ನು ತಿಳಿಸಿದರು.

 ಈ ಸಂದರ್ಭದಲ್ಲಿ ಅನಂತ ಮಹಲ್ ಮಾಲಕರಾದ  ಗಣೇಶ್ ಆಚಾರ್ಯ ಅವರು ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತರಲು ಹೋರಾಡಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಬಲಿದಾನವನ್ನು ನೀಡಿದ ಹುತಾತ್ಮರ ದೇಶಸೇವೆಯನ್ನು ಸ್ಮರಿಸಿದರು. ಪ್ರಸ್ತುತ ದೇಶದ ಗಡಿ ಕಾಯುವ ವೀರಯೋಧರ ದೇಶ ಸೇವೆಯನ್ನು ಉಲ್ಲೇಖಿಸಿ, ಇಂದು ದೇಶದೆಲ್ಲೆಡೆ ಅತ್ಯಂತ ಸಂಭ್ರಮ ಮತ್ತು ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಿ ಹಲವೆಡೆ ಸ್ವಚ್ಛತಾ ಕಾರ್ಯಕ್ರಮ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಮಾದರಿಯಾಗುವ ಕೆಲಸಗಳು ನಡೆಯುತ್ತಿವೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ  ಜೇಸಿಐ ಕಾಪು ಘಟಕದ ಪೂರ್ವಾಧ್ಯಕ್ಷ ಜಗದೀಶ್ ಬಂಗೇರ, ರಮೇಶ್ ನಾಯ್ಕ್ ಮತ್ತು ಉಪಾಧ್ಯಕ್ಷರಾದ ಕಾರ್ತಿಕ್ ಆಚಾರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

15 Aug 2026, 05:12 PM
Category: Kaup
Tags: