ಸಾಮಾಜಿಕ ಕಾರ್ಯಕರ್ತೆ ನೀತಾ ಪ್ರಭುರವರ ಜನ್ಮ ದಿನಾಚರಣೆಯ ಪ್ರಯುಕ್ತ ದಿನಸಿ ಸಾಮಾಗ್ರಿ ವಿತರಣೆ
Thumbnail
ಕಾಪು : ಸಾಮಾಜಿಕ ಕಾರ್ಯಕರ್ತೆ ಕಾಪುವಿನ ನೀತಾ ಪ್ರಭುರವರ ಜನ್ಮ ದಿನಾಚರಣೆಯ ಪ್ರಯುಕ್ತ ಆಶಾ ಕಾರ್ಯಕರ್ತೆಯರಿಗೆ 10 ಕೆ.ಜಿ‌ ಅಕ್ಕಿ ಸೇರಿದಂತೆ ದಿನಸಿ ಸಾಮಾಗ್ರಿಗಳನ್ನು ನೀಡಲಾಯಿತು. ಸುಮಾರು 25 ಸಾವಿರ ಮೌಲ್ಯದ 30 ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭ ಜೀವನ್ ಶೆಟ್ಟಿ ಮಲ್ಲಾರ್, ಪ್ರಜ್ವಲ್ ಶೆಟ್ಟಿ ಮಲ್ಲಾರ್, ಪ್ರಶಾಂತ್ ಪೂಜಾರಿ, ಯಾದವ ಪೂಜಾರಿ, ಶ್ರೀಕಾಂತ್ ನಾಯಕ್, ಮಧುಕರ್ ಪೂಜಾರಿ, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಬ್ರಾಯ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
Additional image Additional image
25 May 2021, 03:55 PM
Category: Kaup
Tags: