ಬ್ರಹ್ಮಾವರ : ಜಯಂಟ್ಸ್ ಗ್ರೂಪ್ ಮತ್ತು ಭಾರತೀಯ ಜನೌಷಧಿ ಕೇಂದ್ರದಿಂದ ವನಮಹೋತ್ಸವ ಮತ್ತು ಸಸಿ ವಿತರಣೆ
Thumbnail
ಉಡುಪಿ : ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಮತ್ತು ಭಾರತೀಯ ಜನೌಷಧಿ ಕೇಂದ್ರದ ವತಿಯಿoದ ವಿಶ್ವ ಪರಿಸರ ದಿನದ ಅಂಗವಾಗಿ ವನ ಮಹೋತ್ಸವ ಮತ್ತು ಸಸಿ ವಿತರಣಾ ಕಾಯ೯ಕ್ರಮ ಜನೌಷಧಿ ಕೇಂದ್ರ ಪರಿಸರದಲ್ಲಿ ನಡೆಯಿತು. ಸಸಿ ನೆಟ್ಟು ಕಾಯ೯ಕ್ರಮಕ್ಕೆ ಚಾಲನೆ ನೀಡಿದ ಬ್ರಹ್ಮಾವರ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆ ವೈದ್ಯಾಧಿಕಾರಿ ಡಾII ಅಜಿತ್ ಕುಮಾರ್ ಶೆಟ್ಟಿ ಶುಭ ಹಾರೈಸಿದರು. ಈ ಸಂದಭ೯ದಲ್ಲಿ ವಲಯ ಅರಣ್ಯಧಿಕಾರಿಗಳಾದ ರವೀಂದ್ರ ಆಚಾರ್, ನವೀನ್ ಕೆ., ವೈದ್ಯರುಗಳಾದ ಡಾII ಮಹೇಶ್ ಐತಾಳ, ಡಾII ಮಹಾಬಲ ಕೆ.ಎಸ್, ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ, ಜಯಂಟ್ಸ್ ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂಧನ್ ಹೇರೂರು, ಶ್ರೀನಾಥ್ ಕೋಟ, ಮಿಲ್ಟನ್ ಒಲಿವರ್, ವಿವೇಕ್ ಶೆಣೈ ರಂಗ ನಿದೇ೯ಶಕ ರವಿರಾಜ್ ಹೆಚ್.ಪಿ. ಮತ್ತಿತರರು ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿ, ವಂದಿಸಿದರು.
05 Jun 2021, 03:09 PM
Category: Kaup
Tags: