ರಾಜ್ಯ ಸರ್ಕಾರದಿಂದ ಅಧಿಕೃತ ಮಾನ್ಯತೆ ಸಿಗಲು ನಾಳೆ ತುಳುನಾಡಿನಾದ್ಯಂತ "ಟ್ವಿಟ್ ತುಳುನಾಡ್" ಅಭಿಯಾನ
Thumbnail
ತುಳು ಭಾಷೆಗೆ ರಾಜ್ಯ ಭಾಷೆಯ ಮಾನ್ಯತೆ ದೊರಕಬೇಕೆಂಬ ನೆಲೆಯಲ್ಲಿ ಹಲವಾರು ದಿನಗಳ ಬೇಡಿಕೆಯಾಗಿತ್ತು. ತುಳು ಭಾಷೆಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯೆತ್ತುವ ನಿಟ್ಟಿನಲ್ಲಿ ಜೈ ತುಳುನಾಡ್ ಸಂಘಟನೆ ಟ್ವೀಟ್ ತುಳುನಾಡ್ ಟ್ವಿಟ್ಟರ್ ಅಭಿಯಾನವನ್ನು ಹಮ್ಮಿಕೊಂಡಿದೆ. ನಾಳೆ (ಜೂನ್ 13) ಬೆಳಿಗ್ಗೆ 6ರಿಂದ ರಾತ್ರಿ 11.59 ರವರೆಗೆ ನಡೆಯಲಿದೆ. #TuluOfficialinKA_KL ಹ್ಯಾಶ್ ಟ್ಯಾಗ್ ಮಾಡುವ ಮೂಲಕ ತುಳುನಾಡಿನ ಸಮಸ್ತರು ಟ್ವೀಟ್ ಅಭಿಯಾನದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದಾರೆ. ಇದಕ್ಕಾಗಿ ತಾಲೂಕು ಗುಂಪುಗಳನ್ನು ಮಾಡಲಾಗಿದ್ದು ಅದರ ಮೂಲಕ ಅಭಿಯಾನ ಮಾಡಬೇಕೆಂದು ತಿಳಿಸಿದ್ದಾರೆ. ಟ್ವೀಟ್ ತುಳುನಾಡ್ ಅಭಿಯಾನದ ಪ್ರತಿ ತಾಲೂಕಿನ ವಾಟ್ಸಾಪ್ ಗ್ರೂಪ್ 1) ನಿಮ್ಮ ತಾಲೂಕಿನ ಗ್ರೂಪಿಗೆ ಸೇರಿಕೊಳ್ಳಿ. (ನಿಮ್ಮ ತಾಲೂಕಿನ ಹೆಸರಿನ ಮೇಲೆ ಒತ್ತುವ ಮೂಲಕ) 2) ಟ್ವೀಟ್ ಅಭಿಯಾನ ಮತ್ತು ತುಳುನಾಡಿಗೆ ಆಗುವ ಅನ್ಯಾಯದ ಬಗ್ಗೆ ಮಾತ್ರ ಪೋಸ್ಟ್ ಹಾಕಬಹುದು, ವಿಚಾರಾತ್ಮಕ ಚರ್ಚೆ ಮಾಡಬಹುದು. 3) ಟ್ವೀಟ್ ಅಭಿಯಾನದಲ್ಲಿ ಯಾವ ರೀತಿಯಲ್ಲಿ ಟ್ವೀಟ್ ಬರೆಯಬಹುದು ಎಂಬ ಸಲಹೆ ಸೂಚನೆಗಳನ್ನು ಕೊಡಬಹುದು. Bolther (Belthangady), Bantwala Bolther(Belthangady), Bantwala 2 Kaup, Odipu (Udupi) , Brahmavara Mulki, Bedra Moodbidri Kudla, Ullala Kudla, Ullala 2 Karla (Karkala), Hebri Sullia(Sulya), Puttur, Kadaba Sullia (Sulya), Puttur, Kadaba 2 Kasrod (Kasargod), Manjeshwar Gulf Countries
12 Jun 2021, 06:00 PM
Category: Kaup
Tags: