ಸ್ಥಳೀಯ ನಾಯಕನಿಂದ 75 ಕುಟುಂಬಗಳಿಗೆ ದೈನಂದಿನ ಬಳಕೆಯ ಕಿಟ್ ವಿತರಣೆ
Thumbnail
ಎರ್ಮಾಳ್, ಎ.16 : ಶ್ರೀ ಬ್ರಹ್ಮ ಬೈದರ್ಕಳ ಗರಡಿ ಸಂದುದಾಂತಿ, ತೆಂಕ ಎರ್ಮಾಳ್ ಇಲ್ಲಿ ಕಾಪು ಪರಿಸರದ 75 ಬಡಕುಟುಂಬಗಳಿಗೆ ಸ್ಥಳೀಯ ಜನನಾಯಕ ದೀಪಕ್ ಕುಮಾರ್ ಎರ್ಮಾಳ್ ರಿಂದ ದೈನಂದಿನ ಬಳಕೆಯ ಆಹಾರದ ಕಿಟ್ ಹಾಗೂ ಪತ್ರಕರ್ತ ಮತ್ತು ಫೋಟೋಗ್ರಾಫರ್ ತಂಡದವರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪ್ರಮೋದ್ ಸುವರ್ಣ ಕಟಪಾಡಿ, ಫೋಟೋಗ್ರಾಫರ್ ಅಸೋಷಿಯೇಷನ್ ಅಧ್ಯಕ್ಷರಾದ ವೀರೇಂದ್ರ ಪೂಜಾರಿ ಶಿರ್ವ, ರಾಕೇಶ್ ಕುಂಜೂರು, ವೈ ಜಯಕರ್, ಗಣೇಶ್ ಕೋಟ್ಯಾನ್, ವೈ ಸುಧೀರ್, ಕಾರ್ತಿಕ್ ಕೋಟ್ಯಾನ್, ಕಿಶೋರ್ ಕುಮಾರ್ ಎರ್ಮಾಳ್ ಮತ್ತಿತರು ಉಪಸ್ಥಿತರಿದ್ದರು.
16 Apr 2020, 01:58 PM
Category: Kaup
Tags: