ಉಡುಪಿ ಜಿಲ್ಲಾ ಜೆಡಿಎಸ್ ವತಿಯಿಂದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸರಕಾರದ ಬೃಹತ್ ಮತ್ತು ಉಕ್ಕು ಸಚಿವ ಎಚ್. ಡಿ. ಕುಮಾರಸ್ವಾಮಿಯವರ 66ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು."
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸರಕಾರದ ಬೃಹತ್ ಮತ್ತು ಉಕ್ಕು ಸಚಿವ ಎಚ್. ಡಿ. ಕುಮಾರಸ್ವಾಮಿಯವರ 66ನೇ ಹುಟ್ಟುಹಬ್ಬವನ್ನು ಉಡುಪಿ ಜೆಡಿಎಸ್ ಜಿಲ್ಲಾಧ್ಯಕ ಯೋಗೀಶ್ ವಿ. ಶೆಟ್ಟಿ ನೇತೃತ್ವದಲ್ಲಿ ಉಡುಪಿಯ ಆಶಾ ನಿಲಯ ವಿಕಲಚೇತನ ಮಕ್ಕಳ ಶಾಲೆಯಲ್ಲಿ ಕೇಕ್ ಕತ್ತರಿಸಿ,ಮಕ್ಕಳಿಗೆ ಮತ್ತು ಸಿಬ್ಬಂಧಿಗಳಿಗೆ ಉಟೋಪಚಾರ ನೀಡಿ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಿಸಲಾಯಿತು, ಆಶಾ ನಿಲಯದ ಸಿಬ್ಬಂಧಿ ವರ್ಗದವರು ಸಹಕರಿಸಿದರು.
ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ. ಶೆಟ್ಟಿಯವರು ಮಾತನಾಡುತ್ತಾ ಕುಮಾರಣ್ಣನವರು ಕೇಂದ್ರ ಸಚಿವರಾಗಿ, 2 ಸಲ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಕೊಟ್ಟಂತಹ ಕೊಡುಗೆ,ಕೇಂದ್ರ ಸಚಿವರಾಗಿ ದೇಶಕ್ಕೆ ಮಾಡಿರುವ ಸೇವೆ ಹಾಗೂ ವಿಶೇಷ ಮಕ್ಕಳು, ವಿಕಲಚೇತನರೆಂದರೆ ಕರುಣೆ ತೋರಿಸುವ ತಾಯಿ ಹೃದಯದ ಕುಮಾರಣ್ಣನವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಸಂತೋಷವಾಗುತ್ತದೆ, ಅವರಿಗೆ ಅರೋಗ್ಯಪೂರ್ಣ ದೀರ್ಘಾಯುಷ್ಯವನ್ನು ಭಗವಂತನು ಕರುಣಿಸಲಿ, ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಲಿ ಮುಂದಿನ ದಿನಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸಲಿ ಎಂದು ಜಿಲ್ಲಾ ಜನತೆಯ ಪರವಾಗಿ ಶುಭವನ್ನು ಹಾರೈಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಾಸುದೇವ ರಾವ್, ಜಯಕುಮಾರ್ ಪರ್ಕಳ, ಜಯರಾಮ ಆಚಾರ್ಯ, ಸಬ್ಲಾಡಿ ಮಂಜಯ್ಯ ಶೆಟ್ಟಿ, ಸುಧಾಕರ್ ಶೆಟ್ಟಿ, ಉದಯ್ ಹೆಗ್ಡೆ,ಗಂಗಾಧರ ಬಿರ್ತಿ, ದಕ್ಷಿತ್ ಶೆಟ್ಟಿ, ಉಮೇಶ್ ಕರ್ಕೇರ, ಶಾಲಿನಿ ಆರ್ ಶೆಟ್ಟಿ ಕೆಂಚನೂರು, ದೇವರಾಜ್ ತೊಟ್ಟಮ್, ರಮೇಶ್ ಕುಂದಾಪುರ, ಕಿಶೋರ್ ಬಳ್ಳಾಲ್, ರಾಮರಾವ್ ಉಡುಪಿ, ಕೀರ್ತಿರಾಜ್, ಅಶ್ರಫ್ ಪಡುಬಿದ್ರಿ, ವಿಶಾಲಾಕ್ಷಿ ಶೆಟ್ಟಿ, ವಸಂತಿ, ರಂಗ ಆರ್ ಕೋಟ್ಯಾನ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
