15 ದಿನಗಳ ನಂತರ ಮತ್ತೇ ರಿಕ್ಷಾ ಚಾಲಕರಿಗೆ ನೆರವು ನೀಡಿದ ದಾನಿ
Thumbnail
ಮಡುಂಬು ವಿದ್ವಾನ್ ಕೆ.ಪಿ.ಶ್ರೀನಿವಾಸ್ ತಂತ್ರಿಗಳು ಕೊರೊನ ಲಾಕ್ಡೌನ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕಾಪು, ಉದ್ಯಾವರ, ಶಂಕರಪುರ, ಇನ್ನಂಜೆ ಸೇರಿದಂತೆ ಇನ್ನು ಅನೇಕ ಕಡೆಗಳಲ್ಲಿ ಇರುವ ರಿಕ್ಷಾ ಚಾಲಕರನ್ನು ಗುರುತಿಸಿ. 160 ರಿಕ್ಷಾ ಚಾಲಕರ ಕುಟುಂಬಗಳಿಗೆ 15 ದಿನಕ್ಕೆ ಬೇಕಾಗುವಷ್ಟು ದಿನಬಳಕೆಯ ಸಾಮಗ್ರಿಗಳನ್ನು ಏಪ್ರಿಲ್ 16ರಂದು ನೀಡಿದ್ದರು. ಇದೀಗ ರಿಕ್ಷಾ ಚಾಲಕರಿಗೆ ನೀಡಿದ್ದ ಸಾಮಗ್ರಿಗಳು ಸಂಪೂರ್ಣವಾಗಿ ಖಾಲಿಯಾಗಿದ್ದು ಇದನ್ನರಿತ ಶ್ರೀನಿವಾಸ್ ತಂತ್ರಿಗಳು ಮತ್ತೇ ಸಾಮಗ್ರಿಗಳನ್ನು ನೀಡುವ ಕಾಯಕದಲ್ಲಿ ತೊಡಗಿದ್ದಾರೆ. ಈ ಹಿಂದೆ ನೀಡಿದವರಿಗೆ ಮತ್ತೇ ಅಕ್ಕಿ, ಮಟ್ಟು ಗುಳ್ಳ, ಸೌತೆಕಾಯಿ ಹಾಗೂ ಇನ್ನಿತರ ದಿನ ಬಳಕೆಯ ಸಾಮಗ್ರಿಗಳಿರುವ ಕಿಟ್ ತಯಾರಿಸಿ ಒಟ್ಟು 200 ರಿಕ್ಷಾ ಚಾಲಕರ ಕುಟುಂಬಕ್ಕೆ ಹಂಚಿದ್ದಾರೆ . ಈ ಸಂದರ್ಭದಲ್ಲಿ ಸುರೇಶ್ ಶೆಟ್ಟಿ ಮಡುಂಬು, ಉಮೇಶ್ ಅಂಚನ್ ಮಡುಂಬು, ಸುಬ್ರಹ್ಮಣ್ಯ ಭಟ್, ಶ್ರೇಯಸ್ ಭಟ್ ಹಾಗೂ ಯುವಸೇನೆ ಮಡುಂಬು ಇದರ ಸದಸ್ಯರು ಉಪಸ್ಥಿತರಿದ್ದರು..
01 May 2020, 06:18 PM
Category: Kaup
Tags: