ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಕರ್ವಾಲು 60 ನೇ ವರ್ಷದ ಭಜನಾ ಮಂಗಲೋತ್ಸವ ಪ್ರಯುಕ್ತ ಭಜನಾ ಸಂಭ್ರಮ
Thumbnail
ಉಡುಪಿ : ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಕರ್ವಾಲು 60 ನೇ ವರ್ಷದ ಭಜನಾ ಮಂಗಲೋತ್ಸವ ಪ್ರಯುಕ್ತ ಭಜನಾ ಸಂಭ್ರಮಕ್ಕೆ ವಿಘ್ನವಿನಾಶಕ ವಿಘ್ನೇಶ್ವರನಿಗೆ ಗಣಹೋಮ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 4 ದಿನಗಳ ಕಾಲ ನಗರ ಭಜನೆ ನಡೆಯಲಿದೆ. 25 ನೇ ತಾರೀಕಿನಂದು ಸಂಜೆ 4ಗಂಟೆಗೆ ಪರಮಪೂಜ್ಯ ಕೇಮಾರು ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ , ಖ್ಯಾತ ವಿಮರ್ಶಕರೂ, ವಾಗ್ಮಿಯೂ ಆದ ಶ್ರೀಕಾಂತ ಶೆಟ್ಟಿ ಇವರಿಂದ ಭಜನಾ ಸಂಸ್ಕಾರ ಕುರಿತಂತೆ ವಿಶ್ಲೇಷಣೆ, ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ 60 ಗಂಟೆಗಳ ನಿರಂತರ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. 26 ನೇ ತಾರೀಕಿನಂದು ಬೆಳಿಗ್ಗೆ ಸತ್ಯನಾರಾಯಣ ಪೂಜೆ. 27 ನೇ ತಾರೀಕಿನಂದು ಬೆಳಿಗ್ಗೆ ಶ್ರೀ ಶನಿಕಲ್ಪೋಕ್ತ ಪೂಜೆ ನಡೆಯಲಿದೆ ಎಂದು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಕರ್ವಾಲು ಇದರ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
21 Jan 2022, 09:28 PM
Category: Kaup
Tags: