ಓಮಾನ್ ಲ್ಲಿ ರಸ್ತೆ ಅಪಘಾತ : ಕಾಪುವಿನ ಕಳತ್ತೂರು ನಿವಾಸಿ ಚೇತನ್ ಸಾವು
Thumbnail

ಕಾಪು : ದುಡಿಮೆ ಅರಸಿ ಗಲ್ಪ್ ರಾಷ್ಟ್ರದ ಓಮನ್ ನಲ್ಲಿದ್ದ  ಕಳತ್ತೂರಿನ ಚೇತನ್ ಕುಲಾಲ್ ಭೀಕರ ಅಪಘಾತದಲ್ಲಿ ಮರಣ ಹೊಂದಿರುತ್ತಾರೆ.

 ಎರಡು ದಿನದಲ್ಲಿ ಚೇತನ್ ಪಾರ್ಥಿವ ಶರೀರ ಕಳತ್ತೂರು ಮನೆಗೆ ಬರಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಚೇತನ್ ಕುಲಾಲ್ ಎಳವೆಯಲ್ಲಿಯೇ  ತಾಯಿಯನ್ನು ಕಳೆದು ಕೊಂಡು ದೊಡ್ಡಮ್ಮನ ಆಸರೆಯಲ್ಲಿ ಬೆಳೆದವರು. ಸಹೋದರಿ ಮತ್ತು ಕುಟುಂಬವರ್ಗ ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

10 Feb 2026, 07:33 PM
Category: Kaup
Tags: