ಶಂಕರಪುರ ಸಾಯಿ ಬಾಬಾ ಮಂದಿರದಿಂದ ಆಟೋ ಚಾಲಕರಿಗೆ ಕಿಟ್ ವಿತರಣೆ
Thumbnail
ಉಡುಪಿ(6ಮೇ/2020): ಶಂಕರಪುರ, ಸುಭಾಷ್ ನಗರ, ಇನ್ನಂಜೆ , ಸಾಲ್ಮರ, ಕುರ್ಕಾಲ್ ಅಟೋ ನಿಲ್ದಾಣಗಳ ಆಟೋ ಚಾಲಕರಿಗೆ ಶಂಕರಪುರ ಶ್ರೀ ಸಾಯಿಬಾಬಾ ಮಂದಿರದ ಗುರೂಜಿ ಸಾಯಿಈಶ್ವರ್ ಕಿಟ್ ವಿತರಣೆ ಮಾಡಿದರು. ಒಟ್ಟು 90 ಆಟೋ ಚಾಲಕರಿಗೆ ಕಿಟ್ ವಿತರಣೆ ಮಾಡಿದ ಗುರೂಜಿ ಸಾಯಿಈಶ್ವರ್ ಮಾತನಾಡಿ "ಶಂಕರಪುರ ಶ್ರೀ ಸಾಯಿಬಾಬಾ ಮಂದಿರ ಜೀರ್ಣೋದ್ಧಾರ ಮಾಡಲು ದಾನಿಗಳು ನೀಡಿದ ದೇಣಿಗೆಯನ್ನು ಕರೋನಾ ಸಂತ್ರಸ್ತರಿಗೆ ನೆರವಿಗೆ ಉಪಯೋಗಿಸುತ್ತಿದ್ದು, ಅಟೋ ಚಾಲಕರು ಅನೇಕ ದಿನದಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಷ್ಟದಲ್ಲಿ ಇದ್ದು ನಾವು ನೀಡಿದ ಸ್ವಲ್ಪ ಸಹಾಯ ಅಕ್ಷಯವಾಗಲಿ" ಎಂದು ಹರಸಿದರು. ಮಂದಿರದ ದಾನಿಗಳಾದ ಆಶಿಶ್ ಕೆನೆಟ್ ಮಾರ್ಟಿಸ್ ಪರವಾಗಿ ಜೋಯಿಲ್ಲನ್ ಪಿರೇರ ಉಪಸ್ಥಿತಿ ಇದ್ದರು. ಮಂದಿರದ ಟ್ರಸ್ಟೀ ವಿಶ್ವನಾಥ ಸುವರ್ಣ, ಜಿ.ಪಂ.ಸದಸ್ಯೆ ಗೀತಾಂಜಲಿ ಸುವರ್ಣ, ಗ್ರಾ.ಪಂ.ಮಾಜಿ ಅಧ್ಯಕ್ಷ ಅಶೋಕ್ ರಾವ್, ವಿಜಯ್ ಕುಂದರ್, ಪ್ರಕಾಶ್ ಆಚಾರ್ಯ, ಪುರಂದರ್ ಸಾಲ್ಯಾನ್, ಗಣೇಶ್ ಪಾಲನ್, ಮನೋಹರ್ ಶಂಕರಪುರ, ಸತೀಶ್ ದೇವಾಡಿಗ, ಅಮಿತ್ ಬಜಪೆ ಉಪಸ್ಥಿತರಿದ್ದರು.
06 May 2020, 10:43 AM
Category: Kaup
Tags: