ಉಡುಪಿ ಬೊಬ್ಬರ್ಯ ಯುವಸೇವಾ ಸಮಿತಿಯಿಂದ ಹೊರೆಕಾಣಿಕೆ ಸಮರ್ಪಣೆ
ಉಡುಪಿ : ಕುಕ್ಕೆಹಳ್ಳಿ ಕೊರಗಜ್ಜ ದೈವಸ್ಥಾನದಲ್ಲಿ ಫೆಬ್ರವರಿ 12ರ ಶನಿವಾರದಂದು ನಡೆಯಲಿರುವ ವಾರ್ಷಿಕ ನೇಮೋತ್ಸವಕ್ಕೆ ಉಡುಪಿ ಬೊಬ್ಬರ್ಯ ಯುವಸೇವಾ ಸಮಿತಿಯಿಂದ ಹೊರೆಕಾಣಿಕೆ ಸಲ್ಲಿಸಲಾಯಿತು.
ಈ ಸಂದರ್ಭ ಬೊಬ್ಬರ್ಯ ಯುವಸೇವಾ ಸಮಿತಿಯ ಅಧ್ಯಕ್ಷರಾದ ವರದರಾಜ ಕಾಮತ್ ತುಳುನಾಡಿನ ಧ್ವಜವನ್ನು ಬೀಸುವ ಮೂಲಕ ಹೊರೆಕಾಣಿಕೆಯ ವಾಹನಕ್ಕೆ ಚಾಲನೆ ನೀಡಿದರು.
ಬೊಬ್ಬರ್ಯ ಯುವ ಸೇವಾ ಸಮಿತಿ ಹಾಗೂ ಕೊರಗಜ್ಜ ಯುವ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ವಿನೋದ್ ಶೆಟ್ಟಿ ಮತ್ತು ರವಿ ಶೆಟ್ಟಿ, ಸಂತೋಷ್, ನಾಗರಾಜ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
