ಫೆಬ್ರವರಿ 20 : ಗುರ್ಮೆ ಗೋ ವಿಹಾರ ಲೋಕಾರ್ಪಣೆ
Thumbnail
ಕಾಪು : ತಾಲೂಕಿನ ಗುರ್ಮೆ ಫೌಂಡೇಶನ್ ಪದ್ಮಶ್ರೀ, ಕಳತ್ತೂರು ಗುರ್ಮೆ, ಪದ್ಮಾವತಿ ಪಿ. ಶೆಟ್ಟಿ ಗುರ್ಮೆ ಅವರ ನಾಲ್ಕನೇ ಪುಣ್ಯತಿಥಿಯ ಪ್ರಯುಕ್ತ ಗುರ್ಮೆ ಗೋ ವಿಹಾರ ಲೋಕಾರ್ಪಣೆಯು ಫೆಬ್ರವರಿ 20 ರಂದು ಸಂಜೆ 4 ಗಂಟೆಗೆ ಕಳತ್ತೂರು ಗುರ್ಮೆ ಇಲ್ಲಿ ಜರಗಲಿದೆ. ಕೀರ್ತನ - ಸಾಂತ್ವನ - ಯಕ್ಷಗಾನ ಕಾರ್ಯಕ್ರಮದ ಅಂಗವಾಗಿ ಸಂಜೆ 4ಕ್ಕೆ ಶ್ರೀಕಾಂತ ಶೆಟ್ಟಿ ಕಾರ್ಕಳ ಮತ್ತು ಬಳಗ, ಸಂದೇಶ ಮತ್ತು ಬಳಗ ಮಂಗಳೂರು ಇವರಿಂದ ಭಜನಾ ಸಂಕೀರ್ತನೆ. ಸಂಜೆ 4:30 ಕ್ಕೆ ಸಭಾಕಾರ್ಯಕ್ರಮ, 6:30 ಕ್ಕೆ ಭಜನಾ ಸಂಕೀರ್ತನೆ, 8 ರಿಂದ ಶ್ರೀಗುರು ನರಸಿಂಹ ದಶಾವತಾರ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇವರಿಂದ ದಕ್ಷಯಜ್ಞ - ರಾಜಾ ರುದ್ರಕೋಪ ಎಂಬ ಕಾಲಮಿತಿ ಯಕ್ಷಗಾನ ಬಯಲಾಟ ಜರಗಲಿದೆ. ಉದ್ಘಾಟನೆಯನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್ ನೆರವೇರಿಸಲಿದ್ದು, ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಸ್ವರ್ಣ ಪೀಠಿಕಾಪುರ ಗೌರಿ ಗದ್ದೆಯ ವಿನಯ ಗುರೂಜಿ, ಸಚಿವರಾದ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿ.ಸುನಿಲ್ ಕುಮಾರ್, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಬೆಂಗಳೂರು ಎಂಆರ್ಜಿ ಗ್ರೂಪ್ ಚೆಯರ್ರ್ಮನ್ ಕೆ. ಪ್ರಕಾಶ್ ಶೆಟ್ಟಿ, ಮೂಡಬಿದ್ರೆ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
13 Feb 2022, 05:44 PM
Category: Kaup
Tags: