ಸೈಬ್ರಕಟ್ಟೆ ರೋಟರಿ ಕ್ಲಬ್ : ಪೋಲಿಯೋ ಪ್ಲಸ್ ಸೆಮಿನಾರ್
Thumbnail
ಉಡುಪಿ : ಸೈಬ್ರಕಟ್ಟೆ ರೋಟರಿ ಕ್ಲಬ್ ವತಿಯಿಂದ ವಲಯ ಮಟ್ಟದ ಪೋಲಿಯೋ ಪ್ಲಸ್ ಸೆಮಿನಾರ್ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮದ ಉದ್ಘಾಟನೆ ಮಾಡಿದ ರೋಟರಿ ಜಿಲ್ಲಾ ಪೊಲೀಯೋ ಪ್ಲಸ್ ಚೇರ್ಮನ್ ಡಾ.ಉಮೇಶ್ ಪುತ್ರನ್ ಮಾತನಾಡಿ, ಪೋಲಿಯೋ ನಿರ್ಮೂಲನೆ ಮಾಡುವಲ್ಲಿ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಬಹು ಮುಖ್ಯ ಪಾತ್ರ ವಹಿಸಿದೆ. ಪೋಲಿಯೋ ಲಸಿಕೆ ಗಾಗಿ ಹಲವು ಮಿಲಿಯನ್ ಡಾಲರ್ ಕೊಡುಗೆಯಾಗಿ WHO ಗೆ ನೀಡಿದೆ, ಪೋಲಿಯೋ ಅಭಿಯಾನ ಮತ್ತು ಪೋಲಿಯೋ ಮುಕ್ತ ದೇಶ ಮಾಡಲು ಶ್ರಮಿಸಿದ ಹಿರಿಯರನ್ನು ಸ್ಮರಿಸಿದ್ದಲ್ಲದೆ ಈ ಅಭಿಯಾನ ಇನ್ನೂ ಮುಂದೆ ಕೂಡ ಸತತ ನಡೆಸಬೇಕು ಅಂತ ಹೇಳಿದರು. ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ನಾಗಭೂಷಣ ಉಡುಪ ಮಾತನಾಡಿ ಸರಕಾರದ ಯೋಜನೆಯಲ್ಲಿ ರೋಟರಿ ಮಾತ್ರವಲ್ಲದೆ ಹಲವಾರು ಸಂಘ ಸಂಸ್ಥೆಗಳು ಕೈ ಜೋಡಿಸಿದರೆ ಯಶಸ್ಸು ನಿಶ್ಚಿತ ಅಂಥ ನುಡಿದರು. ಮಾಜಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬಾಯರಿ ಮಾತನಾಡಿ 1995 ರಿಂದ ಭಾರತದಲ್ಲಿ ಪೋಲಿಯೋ ಲಸಿಕೆ ಹಾಕುವ ಅಭಿಯಾನ ಪ್ರಾರಂಭವಾಗಿ 2011ರಲ್ಲಿ WHO ಯಾವುದೇ ಪೋಲಿಯೋ ಕೇಸ್ ರಿಪೋರ್ಟ್ ಆಗದ ಕಾರಣ ಭಾರತವನ್ನು ಪೋಲಿಯೋ ಮುಕ್ತ ದೇಶವಾಗಿ ಘೋಷಿಸಿತು. ಭಾರತ ಪೋಲಿಯೋ ಮುಕ್ತವಾಗಿದ್ದರು 5 ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕು ಅಲ್ಲದೆ ಆರೋಗ್ಯದ ಬಗ್ಗೆ ಯೋಜನೆಗಳನ್ನು ಹೇಗೆ ರೂಪಿಸಿಕೊಳ್ಳಬೇಕು ಮತ್ತು ಸರಿಯಾಗಿ ಕಾರ್ಯಗತವಾಗಬೇಕು ಲಸಿಕೆ ಮತ್ತು ಚುಚ್ಚುಮದ್ದನ್ನು ಸರಿಯಾಗಿ ಅವಶ್ಯಕತೆ ಇರುವವರಿಗೆ ಸಿಗಬೇಕು,ಅಂತ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಯು.ಪ್ರಸಾದ್ ಭಟ್ ವಹಿಸಿದ್ದು, ರೋಟರಿ ಸಹಾಯಕ ಗವರ್ನರ್ ಪದ್ಮನಾಭ್ ಕಾಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಸೇನಾನಿಗಳಾದ ವಿಜಯಕುಮಾರ್ ಶೆಟ್ಟಿ ಮತ್ತು ಬ್ರಾನ್ ಡಿ ಸೋಜ, ಜೋನಲ್ ಟ್ರೈನರ್ ದೇವಾನಂದ್ ಉಪಸ್ಥಿತರಿದ್ದರು. ಪೋಲಿಯೋ ಪ್ಲಸ್ ಜೋನಲ್ ಕೋ ಆರ್ಡಿನೇಟರ್ ಡಾ.ಹರೀಶ್ ಕಂದಾವರ ಸ್ವಾಗತಿಸಿ, ಕಾರ್ಯದರ್ಶಿ ಅಣ್ಣಯ್ಯದಾಸ್ ಧನ್ಯವಾದ ಸಮರ್ಪಿಸಿದರು. ವರದರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
15 Feb 2022, 06:09 PM
Category: Kaup
Tags: