ಹಿರಿಯ ಪತ್ರಕರ್ತ ಟಿ ಪಿ ಮಂಜುನಾಥ್ ಅವರಿಗೆ ಬಿ ಅಪ್ಪಣ್ಣ ಹೆಗಡೆ ಜೀವಮಾನ ಸಾಧನ ಪ್ರಶಸ್ತಿ
Thumbnail
ಕುಂದಾಪುರ: ಓಂ ಶಾಂತಿ ಪ್ರೊಡಕ್ಷನ್ ಕೋಟೇಶ್ವರ ಕುಂದಾಪುರ ತಾಲೂಕು ಪತ್ರಕರ್ತರ ಸಂಘ ಆಶ್ರಯದಲ್ಲಿ ಮಾಚ್೯ 1 ರಂದು ಸಂಜೆ 5:30 ಕ್ಕೆ ಹೊಡೆ ಹೋಬಳಿ ಹನುಮನ್ ಗ್ಯಾರೇಜ್ ಸಮೀಪದಲ್ಲಿರುವ ಪ್ರೆಸ್ ಕ್ಲಬ್ ವಠಾರದಲ್ಲಿ ಶಿವರಾತ್ರಿ ಆಧ್ಯಾತ್ಮ ಸಂದೇಶ, ತಾಲೂಕು ಪತ್ರಕರ್ತರ ಸಂಘದ ಮೂರನೇ ವಾರ್ಷಿಕ ಸಂಭ್ರಮ ಜರಗಲಿದೆ. ಈ ಸಂದರ್ಭ ಹಿರಿಯ ಪತ್ರಕರ್ತ ಕುಂದಾಪುರ ಮಿತ್ರ ಪತ್ರಿಕೆಯ ಸಂಪಾದಕ ಟಿ ಪಿ ಮಂಜುನಾಥ್ ರವರಿಗೆ ಅಪ್ಪಣ್ಣ ಹೆಗ್ಡೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ತದನಂತರ ಕುಂದಾಪುರ ಜಿಲ್ಲೆ ಹೋರಾಟ ಎತ್ತ ಸಾಗುತ್ತಿದೆ ಎಂಬ ವಿಷಯದ ಕುರಿತು ಚರ್ಚೆ, ಸಂವಾದ ಹಾಗೂ ಭಕ್ತಿಗಾನ ವೈಭವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
27 Feb 2022, 09:14 PM
Category: Kaup
Tags: