ಪಲ್ಸ್ ಪೋಲಿಯೋ : ರೋಟರಿ ಕಲ್ಯಾಣಪುರ ಅಧ್ಯಕ್ಷರಿಂದ ಚಾಲನೆ
Thumbnail
ಉಡುಪಿ : ರೋಟರಿ ಕಲ್ಯಾಣಪುರದ ವ್ಯಾಪ್ತಿಯಲ್ಲಿ ನಡೆದ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶಂಭು ಶಂಕರ್ ಹಾಗೂ ನಿರಂತರವಾಗಿ 25ವರ್ಷಗಳಿಂದ ಈ ಸಂಸ್ಥೆಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಿರ್ದೇಶಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತ ಬಂದಿರುವ ಗಿರಿಧರ್ ಬಾಳಿಗ ನೇತೃತ್ವದಲ್ಲಿ ಫೆಬ್ರವರಿ 27ರಂದು ಸರ್ಕಾರದ ಪೋಲಿಯೋ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಹೂಡೆ ಮತ್ತು ಕೊಳಲಗಿರಿಯ 5 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇ.96 ಅರ್ಹ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಯಿತು. ಇನ್ನು ಉಳಿದ 2ದಿನಗಳಲ್ಲಿ ಬಾಕಿ ಇದ್ದಿರುವ ಎಲ್ಲಾ ಅರ್ಹ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು ಕ್ರಮ ವಹಿಸಲಾಯಿತು. ರೋಟರಿ ಕಲ್ಯಾಣಪುರದ ಸದಸ್ಯರು 6 ತಂಡಗಳಲ್ಲಿ 2 ಪ್ರಾಥಮಿಕ ಆರೋಗ್ಯ ಕೇಂದ್ರದ 22 ಖಾಯಂ ಮತ್ತು 1 ವಿಶೇಷ ಪೋಲಿಯೋ ಲಸಿಕಾ ಕೇಂದ್ರಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಅಗತ್ಯ ಪ್ರಮಾಣದಲ್ಲಿ ವ್ಯಾಕ್ಸಿನ್ಗಳನ್ನು ಸರಬರಾಜು ಮಾಡಲಾಯಿತು. ಈ ಕೇಂದ್ರಗಳ 135 ಸಿಬ್ಬಂದಿಯವರು ಮತ್ತು ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ವಲಯ ಸೇನಾನಿ ಬ್ರಯಾನ್ ಡಿಸೋಜ, ಕಾರ್ಯದರ್ಶಿ ಪ್ರಕಾಶ್ ಕುಮಾರ್, ಮತ್ತಿತರ ರೋಟರಿ ಪದಾಧಿಕಾರಿಗಳು, ಸದಸ್ಯರು ಹಾಗೂ ಯುವ ವಿಚಾರ ವೇದಿಕೆ ಉಪ್ಪೂರು ಇದರ ಸದಸ್ಯರು ಉಪಸ್ಥಿತರಿದ್ದರು.
Additional image
27 Feb 2022, 10:30 PM
Category: Kaup
Tags: