ಆಟವಾಡಲು ಹೋಗಿ ಕಾಣೆಯಾದ ಬಾಲಕ ಶವವಾಗಿ ಪತ್ತೆ
Thumbnail
ಮಂಗಳೂರು : ಮನೆಯ ಹತ್ತಿರದ ಆಟದ ಮೈದಾನಕ್ಕೆ ಕ್ರಿಕೆಟ್ ಆಟಕ್ಕೆ ತೆರಳಿದ ಬಾಲಕ ಮನೆಗೆ ಬಾರದಿದ್ದನ್ನು ಕಂಡು ಕಾಣೆಯಾದ ಬಗ್ಗೆ ಬಾಲಕನ ತಾಯಿ ದೂರು ನೀಡಿದ್ದರು. ಸಂಜೆಯ ವೇಳೆ ಹೊಯ್ಗೆ ಬಜಾರ್ ಬಳಿಯ ನೇತ್ರಾವತಿ ನದಿಯಲ್ಲಿ ಬಾಲಕನ ಶವ ಪತ್ತೆಯಾದ ಘಟನೆ ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಹಾಕಾಳಿ ಪಡ್ಪು ನಿವಾಸಿಗಳಾದ ಆಶಾ ಮತ್ತು ಚೆನ್ನಪ್ಪ ದಂಪತಿಯ ಪುತ್ರ ದೃಶ್ಯಾಂತ್ (16) ನಗರದ ರೋಸಾರಿಯೋ ಶಾಲೆನಲ್ಲಿ 9ನೇ ತರಗತಿಯಲ್ಲಿ, ವ್ಯಾಸಾಂಗ ಮಾಡುತ್ತಿದ್ದು, ಫೆಬ್ರವರಿ 27ರಂದು ಶಾಲೆಗೆ ರಜೆ ಇದ್ದ ಕಾರಣ ಮಹಾಕಾಳಿ ಪಡ್ಪು ಮೈದಾನದಲ್ಲಿ, ಕ್ರಿಕೆಟ್ ಮ್ಯಾಚ್ ನಲ್ಲಿ ಭಾಗವಹಿಸಿ, ಅವನ ಸ್ನೇಹಿತರೆಲ್ಲರೂ ಅಲ್ಲಿಂದ ಹೊರಟು ಹೋಗಿದ್ದು, ಬಾಲಕ ಮನೆಗೆ ಬಂದಿರದೆ ಇದ್ದುದನ್ನು ಕಂಡು ಕೂಡಲೇ ಅವನ ಸ್ನೇಹಿತರಲ್ಲಿ ಹಾಗೂ ಪರಿಚಯದವರಲ್ಲಿ ಸಂಬಂಧಿಕರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ದೊರೆಯದಿದ್ದನ್ನು ಕಂಡು ಬಾಲಕನ ತಾಯಿ ಪಾಂಡೇಶ್ವರ ಠಾಣೆಯಲ್ಲಿ ದೂರನ್ನು ನೀಡಿದ್ದರು. ಸಂಜೆಯ ವೇಳೆ ಹೊಯ್ಗೆ ಬಜಾರ್ ಬಳಿಯ ನೇತ್ರಾವತಿ ನದಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ .ಈ ಘಟನೆಯ ಬಗ್ಗೆ ನಿಖರವಾದ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.
28 Feb 2022, 11:21 PM
Category: Kaup
Tags: