ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದಿಂದ ಮುದ್ರಕರ ದಿನಾಚರಣೆ
ಉಡುಪಿ : ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಉಡುಪಿ ಇದರ ವತಿಯಿಂದ ಮುದ್ರಕರ ದಿನಾಚರಣೆಯು ಅಮೃತ್ ಗಾರ್ಡನ್ ನಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎಮ್ ಮಹೇಶ್ ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಂಗ್ ಕಮಾಂಡರ್ ಎ ಎಸ್ ಭೋಜರಾಜ್ ಹಾಗೂ ಮುದ್ರಕ ಸೌಹಾರ್ದ ಸಹಕಾರಿ ಯ ಅಧ್ಯಕ್ಷರಾದ ಬಿ ಜಿ ಸುಬ್ಬರಾವ್ ಉಪಸ್ಥಿತರಿದ್ದರು.
ಹಿರಿಯ ಮುದ್ರಕರ ಗೌರವ ಸನ್ಮಾನವನ್ನು ಹಿರಿಯ ಮುದ್ರಕರಾದ ಯು ಮೋಹನ್ ಉಪಾಧ್ಯ, ಆದರ್ಶ ಪ್ರಿಂಟರ್ಸ್ ಉಡುಪಿ ಶಿವರಾಮ್ ಆಚಾರ್ಯ, ಶ್ರೀರಾಮ್ ಪ್ರಿಂಟರ್ಸ್ ಕಾಪು ಕಡರಿ ರವೀಂದ್ರ ಪ್ರಭು, ಮಹಾಲಕ್ಷ್ಮಿ ಪ್ರಿಂಟರ್ಸ್ ಕಾರ್ಕಳ ನಾರಾಯಣ ಕುಂದರ್, ಉಷಾ ಪ್ರಿಂಟರ್ಸ್ ಕುಂದಾಪುರ ಇವರಿಗೆ ನೀಡಿ ಗೌರವಿಸಲಾಯಿತು. ಅದ್ರಷ್ಟ ವ್ಯಕ್ತಿಗಳಾಗಿ ಚಂದ್ರ ನಾಯಿರಿ ಹಾಗೂ ವಿವೇಕಾನಂದ ಕಾಮತ್ ಬಹುಮಾನ ಪಡೆದರು.
ಪ್ರಧಾನ ಕಾರ್ಯದರ್ಶಿ ಮನೋಜ್ ಕಡಬ ಸ್ವಾಗತಿಸಿದರು. ಗೌರವ ಸಲಹೆಗಾರ ಅಶೋಕ್ ಶೆಟ್ಟಿ ಯವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ರಮೇಶ್ ಕುಂದರ್ ನೆರವೇರಿಸಿದರು. ಕೋಶಾಧಿಕಾರಿ ಸುಧೀರ್ ಡಿ ಬಂಗೇರ ಧನ್ಯವಾದವಿತ್ತರು.
