ಪಡುಬಿದ್ರಿ : ರಕ್ತದಾನ ಶಿಬಿರ ಹಾಗೂ ನೇತ್ರದಾನ ಅಭಿಯಾನಕ್ಕೆ ಚಾಲನೆ
Thumbnail
ಪಡುಬಿದ್ರಿ, ಮಾ.6 : ಜೆಸಿಐ ಪಡುಬಿದ್ರಿ ಮತ್ತು ಪಡುಬಿದ್ರಿ ವಲಯದ ಕ್ರಿಕೆಟ್ ತಂಡಗಳು ಹಾಗೂ ಜಿಲ್ಲಾಸ್ಪತ್ರೆ ಉಡುಪಿ ಜಂಟಿ ಆಶ್ರಯದಲ್ಲಿ ಪಡುಬಿದ್ರಿ ಬೋರ್ಡ್ ಶಾಲಾ ವಠಾರದಲ್ಲಿ ಜರಗಿದ ರಕ್ತದಾನ ಶಿಬಿರ ಹಾಗೂ ನೇತ್ರದಾನ ಅಭಿಯಾನವನ್ನು ಕರ್ನಾಟಕ ಸರಕಾರದ ಮಾಜಿ ನಗರಾಭಿವೃದ್ಧಿ ಸಚಿವರಾದ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಜೆಸಿಐ ಪಡುಬಿದ್ರಿ ಅಧ್ಯಕ್ಷರಾದ ಶರತ್ ಶೆಟ್ಟಿ ವಹಿಸಿದ್ದರು. ಈ ಸಂದರ್ಭ ಬಿಜೆಪಿ ಕಾಪು ವಿಧಾನಸಭಾ ಕ್ಷೇತ್ರದ ನಿಕಟ ಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಂಗಳೂರಿನ ಸುಲ್ತಾನ್ ಡೈಮಂಡ್ ಆಂಡ್ ಗೋಲ್ಡ್ ನ ಪರ್ಚೇಸ್ ಮ್ಯಾನೇಜರ್ ಫಯಾಸ್ ಎಸ್. ಪಿ, ಉಡುಪಿ ಜಿಲ್ಲಾಸ್ಪತ್ರೆಯ ಬ್ಲಡ್ ಬ್ಯಾಂಕ್ ಉಸ್ತುವಾರಿ ಡಾ|ವೀಣಾ, ಜೆಸಿಐನ ಸಂತೋಷ್ ಪೂಜಾರಿ, ಜೆಸಿಐ ಪಡುಬಿದ್ರಿ ಕಾರ್ಯದರ್ಶಿ ಸಂತೃಪ್ತಿ ಎಮ್. ಶೆಟ್ಟಿ, ಜೆಸಿಐ ಪಡುಬಿದ್ರಿ ನಿಕಟಪೂರ್ವ ಅಧ್ಯಕ್ಷರಾದ ಶಿವರಾಜ್, ಜೆಸಿಐನ ಪದಾಧಿಕಾರಿಗಳು, ಸದಸ್ಯರು, ಕ್ರಿಕೆಟ್ ತಂಡದ ಪ್ರತಿನಿಧಿಗಳು, ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
06 Mar 2022, 10:54 AM
Category: Kaup
Tags: