ಅಪ್ಪ ಅಮ್ಮ ಅನಾಥಾಲಯದಲ್ಲಿ ಗುರೂಜಿ ಸಾಯಿಈಶ್ವರರಿಂದ ಅಮ್ಮಂದಿರ ದಿನ ಆಚರಣೆ
Thumbnail
ಉಡುಪಿ(10ಮೇ/2020): ಬ್ರಹ್ಮಾವರದ "ಅಪ್ಪ ಅಮ್ಮ ಅನಾಥಾಲಯ"ಕ್ಕೆ ಶಂಕರಪುರ ಸಾಯಿಬಾಬಾ ಮಂದಿರದ ಗುರೂಜಿ ಸಾಯಿಈಶ್ವರ್ ಬೇಟಿ ನೀಡಿ ಅಮ್ಮಂದಿರ ದಿನ ಆಚರಣೆಯಲ್ಲಿ ಭಾಗವಹಿಸಿದರು. ಪ್ರಶಾಂತ್ ಪೂಜಾರಿ ಕೂರಾಡಿಯವರು ನಡೆಸುತ್ತಿರುವ ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ) ಇದರ "ಅಪ್ಪ ಅಮ್ಮ ಅನಾಥಾಲಯ" ಬ್ರಹ್ಮಾವರ ಇಲ್ಲಿ ಅಮ್ಮಂದಿರ ದಿನ ಆಚರಣೆಗೆ ಗುರೂಜಿ ಸಾಯಿಈಶ್ವರ್ ಆಶ್ರಮಕ್ಕೆ ಬೇಟಿ ನೀಡಿ ಆಶ್ರಮ ನಿವಾಸಿಗಳಿಗೆ ಆಶಿರ್ವಾದ ನೀಡಿದರು. ಈ ಸಂದರ್ಭದಲ್ಲಿ ಆಶ್ರಮದ ಮೇಲ್ವಿಚಾರಕರಾದ ಪ್ರಶಾಂತ್ ಪೂಜಾರಿ ಕೂರಾಡಿ, ದಾಮೋದರ ಶರ್ಮ, ಸತೀಶ್ ದೇವಾಡಿಗ ಕಾಪು, ಗಣೇಶ್ ಪಾಲನ್ ಶಂಕರಪುರ ಉಪಸ್ಥಿತರಿದ್ದರು.
10 May 2020, 01:34 PM
Category: Kaup
Tags: