ಮಾಚ್೯ 13 : ಪಾಂಗಾಳ ಬ್ರಹ್ಮಲಿಂಗೇಶ್ವರ ಆದಿ ಆಲಡೆಯಲ್ಲಿ ಹರಕೆಯ ಉತ್ಸವ, ರಂಗಪೂಜೆ, ಬ್ರಹ್ಮಮಂಡಲ ಸೇವೆ
ಪಾಂಗಾಳ : ಮುಕ್ಕಾಲಿ ಅಣ್ಣು ಶೆಟ್ಟಿ ಕುಟುಂಬಸ್ಥರ ಆಡಳಿತದ ಶ್ರೀ ಆದಿ ಆಲಡೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮಾಚ್೯ 13, ಭಾನುವಾರದಂದು ವೈಭವದ ಒಂದು ದಿನದ ಹರಕೆಯ ಉತ್ಸವವು ಮಂಡೇಡಿ ಬಾಲಟ್ಟ ಮನೆ ಕಲ್ಯಾಣಿ ಶೆಟ್ಟಿ ಹಾಗೂ ಇವರ ಕುಟುಂಬಸ್ಥರ ಸೇವಾರ್ಥವಾಗಿ ಜರಗಲಿದೆ.
ಬೆಳಗ್ಗೆ ಪಂಚ ವಿಂಶತಿ ಕಲಶ ಪ್ರಧಾನ ಹೋಮ , ಗಣಯಾಗ ದಿಂದ ಪ್ರಾರಂಭಗೊಂಡು 10:00 ಗಂಟೆಗೆ ಕಲಶಾಭಿಷೇಕ ನಂತರ 11 ಗಂಟೆಗೆ ಮಹಾಪೂಜೆ ನಡೆದು ಬಲಿ ಹೊರಟು ಪಲ್ಲಪೂಜೆ ನಡೆದು ಸರಿಯಾಗಿ 12:30 ಗೆ ಬ್ರಾಹ್ಮಣ ಸುಹಾಸಿನಿ ಆರಾಧನೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಲಿರುವುದು.
ರಾತ್ರಿ 07:30 ಕ್ಕೆ ಭಂಡಾರ ಚಾವಡಿಯಿಂದ ಪರಿವಾರ ದೈವಗಳ ಭಂಡಾರ ಹೊರಟು ರಾತ್ರಿ 08-30 ಕ್ಕೆ ವೈಭವದ ಬೈಗಿನ ಬಲಿಯು ನಡೆಯಲಿರುವುದು.
ರಾತ್ರಿ 11 ಕ್ಕೆ ರಂಗಪೂಜೆ , ರಾತ್ರಿ 12 ಕ್ಕೆ ವೈಭವದ ಬ್ರಹ್ಮಮಂಡಲ ಸೇವೆ ನಡೆದು ರಾತ್ರಿ 3:30 ಕ್ಕೆ ಶ್ರೀ ಭೂತಬಲಿ ಮೂಲಕ ಒಂದು ದಿನದ ಶೈವೋತ್ಸವವು ಸಮಾಪ್ತಿಯಾಗುತ್ತದೆ.
ಭಕ್ತಾದಿಗಳು , ಆದಿ ಭಜಕರು ಕುಟುಂಬ ಸಮೇತರಾಗಿ ಆಗಮಿಸಿ , ಮಹೋತ್ಸವದಲ್ಲಿ ಭಾಗಿಯಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ , ನಾಗದೇವರ ಹಾಗೂ ಶ್ರೀ ಧರ್ಮ ದೈವಗಳ ಕೃಪೆಗೆ ಪಾತ್ರರಾಗಿ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ಸೇವಾರ್ಥಿಗಳು ಹಾಗೂ ದೇವಸ್ಥಾನದ ಪತ್ರಿಕಾ ಪ್ರಕಟಣೆಯು ತಿಳಿಸಿದೆ.
