ಶಿರ್ವ ಸಂತ ಮೇರಿ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ| ಪಾಸ್ಕಲ್‌ ಡೇಸಾ ನಿಧನ
Thumbnail
ಶಿರ್ವ: ಶಿರ್ವ ಸಂತ ಮೇರಿ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ| ಪಾಸ್ಕಲ್‌ಡೇಸಾ (67) ಅವರು ಮಾ. 13ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ನಿವೃತ್ತ ಶಿಕ್ಷಕಿ ಪ್ರಸಿಲ್ಲಾ ಡೇಸಾ ,ಪುತ್ರ ಆರ್ಥೋಪೇಡಿಕ್‌ ಸರ್ಜನ್‌ ಡಾ| ಪ್ರಶಾಂತ್‌ ಡೇಸಾ ಮತ್ತು ಪುತ್ರಿ ವೈದ್ಯೆ ಡಾ|ಪ್ರೀಮಾ ಡೇಸಾ ಅವರನ್ನು ಅಗಲಿದ್ದಾರೆ. ಶಿರ್ವ ಸಂತ ಮೇರಿ ಕಾಲೇಜಿನಲ್ಲಿ 35 ವರ್ಷಗಳ ಕಾಲ ವಾಣಿಜ್ಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾಗಿದ್ದ ಅವರು ಪ್ರಭಾರ ಪ್ರಾಂಶುಪಾಲರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಮಂಗಳೂರು ವಿವಿ ವಾಣಿಜ್ಯ ಪರೀಕ್ಷಾ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ರು. ಕಾಲೇಜಿನಲ್ಲಿ 1984ರಲ್ಲಿ ಎನ್‌ಸಿಸಿ ಘಟಕ ಪ್ರಾರಂಭವಾದಂದಿನಿಂದ 29 ವರ್ಷಗಳ ಕಾಲ ಎನ್‌ಸಿಸಿ ಘಟಕವನ್ನು ಮುನ್ನಡೆಸಿ ಮೇಜರ್‌ ಆಗಿ ನಿವೃತ್ತರಾಗಿದ್ದರು. ಕಾಲೇಜಿನ ಎನ್.ಸಿ.ಸಿ ಘಟಕ ಮತ್ತು ಪರಿಸರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 24 ರಕ್ತದಾನ ಶಿಬಿರಗಳನ್ನು ಆಯೋಜಿಸಿ ಕೆಎಂಸಿ ಬ್ಲಡ್‌ ಬ್ಯಾಂಕ್‌ ಮತ್ತು ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಬ್ಯಾಂಕ್‌ಗೆ ಸಾವಿರಾರು ಯೂನಿಟ್‌ ರಕ್ತ ವನ್ನು ಪೂರೈಕೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
13 Mar 2022, 02:39 PM
Category: Kaup
Tags: