ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ನಮಗೆ ನಿರಾಸೆಯಾಗಿದೆ : ಎಸ್. ಐ. ಓ. ಕರ್ನಾಟಕ
Thumbnail
ಉಡುಪಿ : ಕರ್ನಾಟಕದ ಹೈಕೋರ್ಟ್ ಇಂದು ನೀಡಿದ ತೀರ್ಪಿನಿಂದ ನಮಗೆ ನಿರಾಸೆಯಾಗಿದೆ. ಹಿಜಾಬ್ ಇತರರಿಗೆ ಹಾನಿ ಮಾಡುವುದಿಲ್ಲ ಅಥವಾ ಮನ ನೋಯಿಸುವುದಿಲ್ಲ ಎಂದು ಎಸ್. ಐ. ಓ. ಕರ್ನಾಟಕ ತಿಳಿಸಿದೆ. ವಿದ್ಯಾರ್ಥಿಗಳನ್ನು ತಮ್ಮ ಆತ್ಮಸಾಕ್ಷಿ ಮತ್ತು ಶಿಕ್ಷಣದ ನಡುವೆ ಆಯ್ಕೆ ಮಾಡಿಕೊಳ್ಳುವ ಸ್ಥಿತಿಗೆ ನ್ಯಾಯಾಲಯವು ತರಲಾರದು ಎಂದು ನಾವು ನಿರೀಕ್ಷಿಸಿದ್ದೇವು. ಧಾರ್ಮಿಕ ಆಚರಣೆಗಳು ವ್ಯಕ್ತಿ ಮತ್ತು ದೇವನ ನಡುವಿನ ಸಂಬಂಧದ ಮೂಲಭೂತ ಅಂಶವಾಗಿದೆ ಮತ್ತು ಎಲ್ಲರೂ ಇದನ್ನು ಗೌರವಿಸಬೇಕು ಎಂದು ಪತ್ರಿಕಾ ಪಕಟನೆಯಲ್ಲಿ ತಿಳಿಸಿದ್ದಾರೆ.
15 Mar 2022, 02:45 PM
Category: Kaup
Tags: