ಕಾಪು ಭಾಗದಲ್ಲಿ ಕಿಟ್ ವಿತರಣೆ ಮತ್ತು ಆಶಾಕಾರ್ಯಕರ್ತೆಯರನ್ನು ಹುರಿದುಂಬಿಸಿದ ಕಾಪು ಕ್ಷೇತ್ರದ ಮಾಜಿ ಶಾಸಕ
Thumbnail
ಕಾಪು, ಮೇ. 10 : ಈಗಾಗಲೇ ಅನೇಕ ದಾನಿಗಳು ಕಿಟ್ ವಿತರಣೆ ಮಾಡಿದ್ದು, ಇಂದು ಕಾಪು ಕ್ಷೇತ್ರದ ಮಾಜಿ ಶಾಸಕರಾದ ಸನ್ಮಾನ್ಯ ವಿನಯ್ ಕುಮಾರ್ ಸೊರಕೆಯವರು ಮತ್ತು ಪ್ರಭಾಕರ್ ಪೂಜಾರಿಯವರು ಯಾವುದೇ ಫಲಾಪೇಕ್ಷೆ ಇಲ್ಲದೆ 250 ಕಿಟ್ಟನ್ನು ಬಿಂದಾಸ್ ಫ್ರೆಂಡ್ಸ್ ಕೈಪುಂಜಾಲು ಸದಸ್ಯರ ಸಮ್ಮುಖದಲ್ಲಿ ಕೈಪುಂಜಾಲು ಮತ್ತು ಪೊಲಿಪು ಭಾಗದ ಜನರಿಗೆ ಹಸ್ತಾಂತರಿಸಿದ್ದಾರೆ. ಕಿಟ್ ವಿತರಣೆಗೂ ಮೊದಲು ಪೊಲಿಪು, ಕೈಪುಂಜಾಲು ಭಾಗದ 6 ಜನ ಆಶಾಕಾಯಕರ್ತೆಯರಿಗೆ ಕಿಟ್ ವಿತರಿಸುವ ಮೂಲಕ ಅವರನ್ನು ಹುರಿದುಂಬಿಸುವ ಕಾರ್ಯ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆಯವರು ಇನ್ನು ಮುಂದಿನ ದಿನಗಳಲ್ಲಿಯೂ ಕೊರೊನ ವಾರಿಯರ್ಸ್ ಅಂದರೆ ಪೊಲೀಸ್ ಸಿಬ್ಬಂದಿಗಳು, ವೈದ್ಯರು ಮತ್ತು ಆಶಾಕಾರ್ಯಕರ್ತೆಯರ ಕೆಲಸ ಬಹಳ ಪ್ರಮುಖವಾದದ್ದು, ಹೊರದೇಶ ಮತ್ತು ಹೊರರಾಜ್ಯಗಳಿಂದ ಬರುವವರನ್ನು ತಪಾಸಣೆ ಮಾಡಲು ಮತ್ತು ಅವರಿಗೆ ಬೇಕಾದ ಸವಲತ್ತುಗಳನ್ನು ನೀಡಲು ನಾವು ಸಿದ್ಧರಿರಬೇಕು ಎಂದರು.. ಹಾಗೂ ಈ ಸಂದರ್ಭದಲ್ಲಿ ಪ್ರಭಾಕರ್ ಪೂಜಾರಿ ಮತ್ತು ಬಿಂದಾಸ್ ಫ್ರೆಂಡ್ಸ್ ಕೈಪುಂಜಾಲು ತಂಡದ ಸದಸ್ಯರು ಉಪಸ್ಥಿತರಿದ್ದರು..
10 May 2020, 08:53 PM
Category: Kaup
Tags: