ಪಂಚಲಿಂಗೇಶ್ವರ ರಥೋತ್ಸವದಂದು ಸಾರ್ವಜನಿಕರ ಮನಸೂರೆಗೊಂಡ ಜಾನಪದ ವೈಭವ
Thumbnail
ಬಾರ್ಕೂರು : ಇಲ್ಲಿನ ಶ್ರೀ ಪಂಚಲಿಂಗೇಶ್ವರ ದೇವಾಲಯದ ರಥೋತ್ಸವದ ಪ್ರಯುಕ್ತ ಏಪ್ರಿಲ್ 8ರಂದು ಜಾನಪದ ವೈಭವ ಜರಗಿತು. ಈ ಸಂದರ್ಭ ಪಿ ಕಾಳಿಂಗ ರಾವ್ ಪ್ರತಿಷ್ಠಾನ ಬೆಂಗಳೂರು ಇವರು ಏರ್ಪಡಿಸಿದ ಜಾನಪದ ವೈಭವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ನಾಡಿನ ಖ್ಯಾತ ಸುಗಮ ಸಂಗೀತ ಗಾಯಕರಾದ ಡಾ.ಗಣೇಶ್ ಗಂಗೊಳ್ಳಿ ಬಳಗದವರು ಜಾನಪದ ವೈಭವ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಡಾ.ಗಣೇಶ್ ಗಂಗೊಳ್ಳಿ ಅವರನ್ನು ಕಾಳಿಂಗ ರಾವ್ ಪ್ರತಿಷ್ಠಾನದ ವತಿಯಿಂದ ರಾಮಚಂದ್ರ ನಾಯಕ್ ಸರ್ಕಲ್ ಇನ್ಸ್ಪೆಕ್ಟರ್ ಆಂತರಿಕ ಭದ್ರತಾ ವಿಭಾಗ ಉಡುಪಿ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆ ಇವರು ಸನ್ಮಾನಿಸಿ ಗೌರವಿಸಿದರು. ಮುಖ್ಯ ಅತಿಥಿಗಳಾಗಿ ಸುಧಾಕರ ರಾವ್ ವಿಶ್ರಾಂತ ಮುಖ್ಯ ಶಿಕ್ಷಕರು ಮತ್ತು ಸಾಮಾಜಿಕ ಕಾರ್ಯಕರ್ತರು ಬಾರ್ಕೂರು ಹಾಗೂ ಉದ್ಯಮಿ ಸುರೇಶ್ ಗಾಣಿಗ ಮತ್ತು ಕಾಳಿಂಗ ರಾವ್ ಇವರ ಪುತ್ರ ಸಂತೋಷ್ ಕಾಳಿಂಗ ರಾವ್. ಬುಡಾನ್ ಸಾಹೇಬ್ ಪ್ರಸಾಧನ ವಿಭಾಗದ ಮುಖ್ಯಸ್ಥರಾದ ಶೌಕತ್ ಅಲಿ ಬಾರ್ಕೂರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಹಿರಿಯ ಗಾಯಕರು ಹಾಗೂ ಪಿ ಕಾಳಿಂಗ ರಾವ್ ಅವರ ಮೊಮ್ಮಗ ವಿಜಯ್ ಶಂಕರ್ ಸಂಯೋಜಿಸಿದರು. ಜಾನಪದ ವೈಭವ ಕಾರ್ಯಕ್ರಮಕ್ಕೆ ಸಹ ಗಾಯಕಿಯಾಗಿ ವಿಜಯಾ ಲಕ್ಷ್ಮಿ ಹಾವಾಂಜೆ, ಕೀಬೋರ್ಡ್ ಅಲ್ಲಿ ಚಂದ್ರ ಬೈಂದೂರು ಹಾಗೂ ಸುದರ್ಶನ ಮಲ್ಪೆ ತಬಲಾ ಮತ್ತು ಸತೀಶ್ ಆಚಾರ್ಯ ಬಸ್ರೂರು ರಿದಮ್ ಪ್ಯಾಡ್ ಅಲ್ಲಿ ಸಹಕರಿಸಿದರು.
09 Apr 2022, 10:35 PM
Category: Kaup
Tags: