ವಿಶ್ವ ಹಿಂದೂ‌ ಪರಿಷದ್ ಬಜರಂಗದಳ‌ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು : ದಶಮಾನೋತ್ಸವದ ಪ್ರಯುಕ್ತ ಶ್ರೀರಾಮ ನವಮಿ ಉತ್ಸವ ; ಸಾಮೂಹಿಕ ದೀಪ ಪ್ರಜ್ವಲನೆ ; ಮಂತ್ರ ಪಠಣ
Thumbnail
ಕಾಪು : ವಿಶ್ವ ಹಿಂದೂ‌ ಪರಿಷದ್ ಬಜರಂಗದಳ‌ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ವತಿಯಿಂದ ದಶಮಾನೋತ್ಸವದ ಪ್ರಯುಕ್ತ ಶ್ರೀರಾಮ ನವಮಿ ಉತ್ಸವ ಕಾರ್ಯಕ್ರಮ ಜರಗಿತು. ವಿಶ್ವ ಹಿಂದೂ ಪರಿಷದ್ ಮಟ್ಟಾರು ಉಪಾಧ್ಯಕ್ಷ ಜಗದೀಶ ಆಚಾರ್ಯ ಸಭಾಧ್ಯಕ್ಷತೆ ವಹಿಸಿದ್ದರು. ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಸಾದ್ ಕುತ್ಯಾರು ಧಾರ್ಮಿಕ ಪ್ರವಚನ‌ ನೀಡಿದರು. ವಿಹಿಂಪ ಕಾಪು ಪ್ರಖಂಡ ಧರ್ಮಾಚಾರ್ಯ ಪ್ರಮುಖ್ ವೇದಮೂರ್ತಿ ಪ್ರಸನ್ನ ಭಟ್, ಮಾತೃಶಕ್ತಿ ಮಟ್ಟಾರು ಇದರ ಪ್ರಮುಖ್ ಸುಲೋಚನಾ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶ್ವ ಹಿಂದೂ ಪರಿಷದ್ ಕಾಪು ಪ್ರಖಂಡ ಅಧ್ಯಕ್ಷ ಜಯಪ್ರಕಾಶ್ ಪ್ರಭು ಪ್ರಸ್ತಾವನೆಗೈದರು. ರಂಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಮೂಹಿಕ ದೀಪ ಪ್ರಜ್ವಲನೆಗೆ ಅಯೋಧ್ಯಾ ಕರಸೇವಕರಾದ ರಮೇಶ್ ಪ್ರಭು ಮತ್ತು ದಿನೇಶ್ ಪಾಟ್ಕರ್ ಚಾಲನೆ ನೀಡಿದರು. ನೆರೆದಿರುವ ಎಲ್ಲರೂ ಸಾಮೂಹಿಕವಾಗಿ ಶ್ರೀರಾಮ ತಾರಕ ಮಂತ್ರ ಪಠಣ ಮಾಡಿದರು.
Additional image
11 Apr 2022, 10:14 PM
Category: Kaup
Tags: