ಕಟಪಾಡಿ ಟ್ರಾಫಿಕ್ ಸಮಸ್ಯೆ, ಮುಗಿಯದ ಗೋಳು, ಮುಕ್ತಿ ಎಂದು ?
ಕಟಪಾಡಿ : ಕಾಪು ತಾಲೂಕಿನ ಕಟಪಾಡಿ ಮುಖ್ಯ ಜಂಕ್ಷನ್ ನ ಟ್ರಾಫಿಕ್ ಸಮಸ್ಯೆಯು ವಾಹನ ಸವಾರರಿಗೆ ಮುಗಿಯದ ಗೋಳಾಗಿದೆ. ವಿಶೇಷ ದಿನಗಳಲ್ಲಿ ಇಲ್ಲಿ ಪ್ರತಿದಿನಕ್ಕಿಂತ ಅಧಿಕ ವಾಹನಗಳು ಓಡಾಟ ಕಾಣಬಹುದು ಅಂತಹ ಸಂದರ್ಭ ಟ್ರಾಫಿಕ್ ನಿವಾರಣೆಗೆ ಒಂದಷ್ಟು ಪೋಲಿಸರ ಅಗತ್ಯ ಈ ಸ್ಥಳದಲ್ಲಿದೆ.
ಏಪ್ರಿಲ್ 24 ರಂದು ಮಧ್ಯಾಹ್ನದ ಸಮಯ ಸುಮಾರು ಒಂದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ವಿವಿಧ ಕಾರ್ಯಕ್ರಮಗಳಿಗೆ ತೆರಳಬೇಕಿದ್ದ ಮಂದಿ ಸಕಾಲದಲ್ಲಿ ತಲುಪಲು ಹರಸಾಹಸ ಪಡಬೇಕಾಯಿತು.
ನಾಲ್ಕು ಕಡೆಗಳಿಂದ ಬರುವ ವಾಹನಗಳಿಗೆ ಇಬ್ಬರು ಟ್ರಾಫಿಕ್ ಪೋಲಿಸರು ಇದ್ದರೂ ಕೂಡಾ ವಾಹನ ದಟ್ಟನೆಯನ್ನು ಕಡಿಮೆ ಮಾಡಲು ಅಸಾಧ್ಯವಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರೇ ಮುಂದೆ ನಿಂತು ಟ್ರಾಫಿಕ್ ನಿಯಂತ್ರಣ ಮಾಡಿದ್ದಾರೆ.
ಪ್ರತಿಷ್ಟಿತರು ಬರುವಾಗ ಟ್ರಾಫಿಕ್ ಸಮಸ್ಯೆಯನ್ನು ಕೂಡಲೇ ಬಗೆಹರಿಸುವ ಪೋಲಿಸರಿಗೆ ಇದೀಗ ಜನಸಾಮಾನ್ಯರ ಗೋಳು ಕಾಣುವುದಿಲ್ಲವೇ ? ಇಲಾಖೆಗಳು ಈ ಟ್ರಾಫಿಕ್ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
