ಎರ್ಮಾಳು ಮೂಡಬೆಟ್ಟು ಬರ್ಪಾಣಿ ಜಗನ್ನಾಥ ಶೆಟ್ಟಿ ನಿಧನ
ಕಾಪು, ಏ.29 : ಎರ್ಮಾಳು ಮೂಡಬೆಟ್ಟು ಬರ್ಪಾಣಿ ಜಗನ್ನಾಥ ಶೆಟ್ಟಿ (94) ಇಂದು ದೈವಾದೀನರಾದರು.
ಎರ್ಮಾಳಿನ ಪ್ರತಿಷ್ಠಿತ ಬಂಟಮನೆತನದ ಜಗನ್ನಾಥ ಶೆಟ್ಟಿಯವರು ಕೃಷಿಕರಾಗಿ ಪ್ರಸಿದ್ಧರು. ಧಾರ್ಮಿಕ - ಸಾಂಸ್ಕೃತಿಕವಾಗಿ ತಮ್ಮನ್ನು ಗುರುತಿಸಿಕೊಂಡಿದ್ದರು. ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದಲ್ಲಿ ಸಕ್ರಿಯರಾಗಿದ್ದರು, ದೈವಸ್ಥಾನಗಳಲ್ಲಿ ತಮ್ಮ ಮನೆತನವನ್ನು ಪ್ರತಿನಿಧಿಸುತ್ತಿದ್ದರು.
ಉಚ್ಚಿಲ ರೋಟರಿ ಸಂಸ್ಥೆ ಶೆಟ್ಟಿಯವರನ್ನು ಯಶಸ್ವೀ ಕೃಷಿಕನೆಂದು ಶ್ಲಾಘಿಸಿ ಸಮ್ಮಾನಿಸಿದೆ. ಜಗನ್ನಾಥ ಶೆಟ್ಟರು ಸರಳ ಸಜ್ಜನಿಕೆಯಿಂದ ಸಮಾಜದಲ್ಲಿ ಜನಪ್ರಿಯರಾಗಿದ್ದರು.
ಅವರ ಅಂತ್ಯಕ್ರಿಯೆಯು ಎರ್ಮಾಳು ಮೂಡಬೆಟ್ಟು ಬರ್ಪಾಣಿ ಮನೆಯ ಪರಿಸರದಲ್ಲಿ ಸಂಜೆ ಗಂಟೆ 5 ರಿಂದ 6ರ ವೇಳೆ ನಡೆಯಲಿದೆ ಎಂದು ತಿಳಿಸಿದ್ದಾರೆ.
