ಕೋಟಿ ಚೆನ್ನಯ್ಯ ಪೌಂಡೇಶನ್ ಕಾಪು ವತಿಯಿಂದ ಯಕ್ಷಗಾನ ಕಲಾವಿದನ ಚಿಕಿತ್ಸೆಗೆ ನೆರವು
Thumbnail
ಕಾಪು : ಯಕ್ಷಗಾನ ಕ್ಷೇತ್ರದ ಪ್ರತಿಭೆ ಗಣೇಶ್ ಕೊಲೆಕಾಡಿ, ಮುಲ್ಕಿಯವರು ಅನಾರೋಗ್ಯದಿಂದ ಮಂಗಳೂರಿನ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸೆಗೆ ಕೋಟಿ ಚೆನ್ನಯ್ಯ ಪೌಂಡೇಶನ್(ರಿ), ಕಾಪು ಇದರ ವತಿಯಿಂದ ರೂಪಾಯಿ 28,000 ಗಳ ಚೆಕ್ಕನ್ನು ಕೋಟಿ ಚೆನ್ನಯ್ಯ ಫೌಂಡೇಶನ್(ರಿ) ಇದರ ಅಧ್ಯಕ್ಷರಾದ ಡಾ.ರಾಜಶೇಖರ್ ಕೋಟ್ಯಾನ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗೋಪಿನಾಥ ಪಡಂಗ,ಧನಂಜಯ ಮಟ್ಟು, ಪುಷ್ಪರಾಜ್ ಕೊಲೆಕಾಡಿ, ಶಶಿಧರ ಬಂಗೇರ ಉಪಸ್ಥಿತರಿದ್ದರು.
30 Apr 2022, 09:05 AM
Category: Kaup
Tags: