ಮೇ 2 ರಿಂದ 7ರವರೆಗೆ ಪ್ರಥಮ್ಸ್ ಮ್ಯಾಜಿಕ್ ವಲ್ಡ್೯ ಕಟಪಾಡಿಯಿಂದ ಮಕ್ಕಳಿಗಾಗಿ ರಜಾ ಶಿಬಿರ
Thumbnail
ಕಟಪಾಡಿ : ಇಲ್ಲಿನ ಪ್ರಥಮ್ಸ್ ಮ್ಯಾಜಿಕ್ ವಲ್ಡ್೯ ಇವರಿಂದ 1ರಿಂದ 10ನೇ ತರಗತಿಯೊಳಗಿನ ಮಕ್ಕಳಿಗಾಗಿ ರಜಾ ಶಿಬಿರವು ಮೇ 2 ರಿಂದ 7ರವರೆಗೆ )ಪ್ರತೀ ದಿನ ಬೆಳಗ್ಗೆ 9 ರಿಂದ 1 ಗಂಟೆ ತನಕ ಎಸ್. ವಿ. ಎಸ್ ಹಿ. ಪ್ರಾ.ಶಾಲೆ ಕಟಪಾಡಿ ಇಲ್ಲಿ ಜರಗಲಿದೆ. ಅಂತರರಾಷ್ಟ್ರೀಯ ಖ್ಯಾತಿಯ ತರಬೇತುದಾರರಾದ ವೆಂಕಿ ಪಲಿಮಾರು, ಪ್ರಸಾದ್ ರಾವ್ ಉಡುಪಿ, ಮುಸ್ತಫಾ, ರಮೇಶ್ ಬಂಟಕಲ್, ವಂದನಾ ರೈ ಕಾರ್ಕಳ, ಸೂರ್ಯ ಪುರೋಹಿತ್ ಕಾರ್ಕಳ ಮತ್ತು ಪ್ರಥಮ್ ಕಾಮತ್ ಕಟಪಾಡಿ ಇವರಿಂದ ಮಕ್ಕಳಿಗಾಗಿ ಡ್ರಾಯಿಂಗ್, ಕ್ಲೇ ಮಾಡೆಲಿಂಗ್, ಅಭಿನಯ, ಮ್ಯಾಜಿಕ್, ಪೇಪರ್ ಕ್ರಾಪ್ಟ್, ಡ್ಯಾನ್ಸ್, ಟ್ಯಾಟೂ, ಮುಖವಾಡ ತಯಾರಿ, ಪಿಕ್ನಿಕ್ ಇತ್ಯಾದಿ ಹೊಸತನದ ಕ್ರಿಯಾಶೀಲ ಚಟುವಟಿಕೆಗಳ ಶಿಬಿರ ಜರಗಲಿದೆ. ಕಳೆದ ಬಾರಿ ಕೊರೊನ ಸಮಯ ಕಟಪಾಡಿಯ ಪ್ರಥಮ್ಸ್ ಮ್ಯಾಜಿಕ್ ವಲ್ಡ್೯ನಿಂದ ಉಚಿತವಾಗಿ ನಮ್ಮ ರಾಜ್ಯವಲ್ಲದೆ ಹೊರ ರಾಜ್ಯದ ಮಕ್ಕಳು ಸೇರಿದಂತೆ ಸುಮಾರು 1ಸಾವಿರಕ್ಕೂ ಅಧಿಕ ಮಕ್ಕಳಿಗೆ ರಜಾ ಮಜಾ ಎಂಬ ವಾಟ್ಸಾಪ್ ಗ್ರೂಪಿನ ಮೂಲಕ ದಿನಕ್ಕೊಂದು ಪ್ರಸಿದ್ಧ ತರಬೇತುದಾರರಿಂದ ಸಾಹಿತ್ಯ, ಕರಕುಶಲಕಲೆಗೆ ಸಂಬಂಧಿಸಿದಂತೆ ತರಬೇತಿ ನೀಡಿದ ಹೆಗ್ಗಳಿಕೆಯಿದ್ದು ಈ ಬಾರಿ ಕಟಪಾಡಿಯಲ್ಲಿ ಮಕ್ಕಳ ಉಪಸ್ಥಿತಿಯೊಂದಿಗೆ ಶಿಬಿರ ನಡೆಯಲಿದೆ. ಕೇವಲ 50 ಮಂದಿಗೆ ಮಾತ್ರ ಅವಕಾಶ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಶಿಬಿರದ ಆಯೋಜಕರಾದ ನಾಗೇಶ್ ಕಾಮತ್ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಕೆ.ನಾಗೇಶ್ ಕಾಮತ್, ಕಟಪಾಡಿ 9886432197
30 Apr 2022, 06:33 PM
Category: Kaup
Tags: