ಗಾನ ವೈಭವ ; ಶ್ರೀನಿವಾಸ ಕಲ್ಯಾಣ ಕಿರು ಯಕ್ಷಗಾನ ಪ್ರದರ್ಶನ
Thumbnail
ನಂದಿಕೂರು : ಸುವರ್ಣ ಪ್ರತಿಷ್ಠಾನ ಕರ್ನಿರೆ ವತಿಯಿಂದ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ಅಜೇರು ಅವರಿಂದ ಗಾನ ವೈಭವ ಹಾಗೂ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶ್ರೀನಿವಾಸ ಕಲ್ಯಾಣ ಯಕ್ಷಗಾನ ಪ್ರದರ್ಶನ ನಂದಿಕೂರಿನ ಸುವರ್ಣ ಸದನ ನಿವಾಸದಲ್ಲಿ ಸೋಮವಾರ ನಡೆಯಿತು. ಕಲಾವಿದರಾದ ವಸಂತ ಗೌಡ ಕಾಯರ್ತಡ್ಕ, ಸಂತೋಷ್ ಕುಮಾರ್ ಹಿರಿಯಾಣ, ಕಾವ್ಯಶ್ರೀ ಅಜೇರು ಅವರನ್ನು ಸನ್ಮಾನಿಸಲಾಯಿತು. ಸುವರ್ಣ ಪ್ರತಿಷ್ಠಾನ ಅಧ್ಯಕ್ಷ ಪ್ರಭಾಕರ್ ಡಿ. ಸುವರ್ಣ, ಹಿರಿಯರಾದ ಭುಜಂಗ ಡಿ. ಸುವರ್ಣ, ಶಿವಾನಂದ ಸುವರ್ಣ ಮೊದಲಾದವರಿದ್ದರು. ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.
09 May 2022, 10:49 PM
Category: Kaup
Tags: