ಉದ್ಯಾವರ : ಖಾಸಗಿ ಬಸ್ ಪಲ್ಟಿ
Thumbnail
ಉಡುಪಿ : ಖಾಸಗಿ ಎಕ್ಸ್ ಪ್ರೆಸ್ ಬಸೊಂದು ಉದ್ಯಾವರ ಬಲಾಯಿಪಾದೆ ಬಳಿ ಮಗುಚಿ ಬಿದ್ದ ಘಟನೆ ಇಂದು ನಡೆದಿದೆ. ಮಂಗಳೂರಿನಿಂದ ಉಡುಪಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಇದಾಗಿದ್ದು, ಬಲಾಯಿಪಾದೆಯ ಬಳಿ ಬ್ಯಾರಿಕೇಡ್ ದಾಟುವಾಗ ಡಿವೈಡರ್ ಮೇಲೆ ಮಗುಚಿ ಬಿದ್ದಿದೆ. 20 ಮಂದಿ ಪ್ರಯಾಣಿಕರು ಗಾಯಗೊಂಡು ಉಡುಪಿ ಮತ್ತು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಉಡುಪಿ ಸಂಚಾರಿ ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
12 May 2022, 05:14 PM
Category: Kaup
Tags: