ಕರಂಬಳ್ಳಿ ಗೋಪಾಲ್ ಶೆಟ್ಟಿ ನಿಧನ
Thumbnail
ಉಡುಪಿ :ದೈವಾರಾಧನೆ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಕರಂಬಳ್ಳಿ ಗೋಪಾಲ್ ಶೆಟ್ಟಿ ಇಂದು ನಿಧನರಾಗಿದ್ದಾರೆ. ಕರಂಬಳ್ಳಿ ಗೋಪಾಲ್ ಶೆಟ್ಟಿ ದೊಡ್ಡನಗುಡ್ಡೆ ಪಂಚ ಜುಮಾದಿ ದೈವಸ್ಥಾನದ ಶೆಟ್ಟಿ ಬಾಲೆ ಹಾಗೂ ದೈವಸ್ಥಾನದ ಆಡಳಿತ ಮಂಡಳಿ ಟ್ರಸ್ಟಿ ಸದಸ್ಯರು, ಕಾಂಗ್ರೆಸ್ ಮುಖಂಡರು, ಮಣಿಪಾಲ ಮಾಜಿ ಮಂಡಳ ಪಂಚಾಯತ್ ಸದಸ್ಯರು, ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ದೊಡ್ಡನಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಹಲವಾರು ಸಂಘ ಸಂಸ್ಥೆಯ ಸದಸ್ಯರು, ದೈವಾರಾಧನೆ ಕ್ಷೇತ್ರದಲ್ಲಿ ಮದಿಪು ಹೇಳುವ ಮೂಲಕ ದೈವ ಚಾಕ್ರಿ ಮಾಡಿದವರಾಗಿದ್ದಾರೆ.
26 May 2022, 10:24 PM
Category: Kaup
Tags: